
ಒಂದೇ ದಿನ ಶುಭ ಸುದ್ದಿ ಕೊಟ್ಟ ದರ್ಶನ್-ಪವಿತ್ರಾ ಗೌಡ, ಏನಿದು ಹೊಸ ಲೋಕ!
ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಎ1 & ಎ2 ಆರೋಪಿಗಳಾಗಿ ಜೈಲು ಸೇರಿ ಜಾಮೀನು ಮೇಲೆ ಆಚೆ ಬಂದಿರೋ ಪವಿತ್ರಾ & ದರ್ಶನ್ ಮತ್ತೆ ಆಕ್ಟಿವ್ ಆಗಿದ್ದಾರೆ. ಒಂದೇ ದಿನ ಈ ಇಬ್ಬರೂ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ...
ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಎ1 & ಎ2 ಆರೋಪಿಗಳಾಗಿ ಜೈಲು ಸೇರಿ ಜಾಮೀನು ಮೇಲೆ ಆಚೆ ಬಂದಿರೋ ಪವಿತ್ರಾ & ದರ್ಶನ್ ಮತ್ತೆ ಆಕ್ಟಿವ್ ಆಗಿದ್ದಾರೆ. ಒಂದೇ ದಿನ ಈ ಇಬ್ಬರೂ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ತಮ್ಮ ಸಹೋದರ ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ಸಿನಿಮಾ ನೋಡಿ ನಟ ದರ್ಶನ್ ಎಂಜಾಯ್ ಮಾಡಿದ್ದಾರೆ. ಇತ್ತ, ಪವಿತ್ರಾ ಗೌಡ ತಮ್ಮಹಳೆಯ 'ರೆಡ್ ಕಾರ್ಪೆಟ್ ಸ್ಟುಡಿಯೋ'ನ ರೀ ಓಪನ್ ಮಾಡಿ ಮತ್ತೆ ಬಲಗಾಲಿಟ್ಟು ಒಳಗೆ ಹೋಗಿದ್ದಾರೆ.
ಹೌದು, ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಆರು ತಿಂಗಳು ಜೈಲು ಸೇರಿ, ಹೊರಬಂದಿರೋ ದರ್ಶನ್ ಅಂಡ್ ಪವಿತ್ರಾ ಗೌಡ, ಮತ್ತೆ ತಮ್ಮ ರೂಟಿನ್ ಲೈಫ್ಗೆ ಮರಳ್ತಾ ಇದ್ದಾರೆ. ದರ್ಶನ್ ಫ್ಯಾಮಿಲಿ ಜೊತೆ ಟೈಮ್ ಕಳೀತಾ ಇದ್ರೆ, ಅತ್ತ ಪವಿತ್ರಾ ತನ್ನ ವ್ಯಾಪಾರ ವಹಿವಾಟು ಮತ್ತೆ ಶುರು ಮಾಡ್ಲಿಕ್ಕೆ ಸಜ್ಜಾಗ್ತಾ ಇದ್ದಾರೆ.
ದರ್ಶನ್ ಸೋದರ ದಿನಕರ್ ಡೈರೆಕ್ಟ್ ಮಾಡಿರೋ ರಾಯಲ್ ಸಿನಿಮಾ ಇದೇ ವಾರಾಂತ್ಯಕ್ಕೆ ತೆರೆಗೆ ಬರ್ತಾ ಇದೆ. ದರ್ಶನ್ ತನ್ನ ಫ್ಯಾಮಿಲಿ ಜೊತೆಗೆ ಸ್ಪೆಷಲ್ ಶೋನಲ್ಲಿ ಈ ಸಿನಿಮಾ ನೋಡಿ ತಮ್ಮನಿಗೆ ಶುಭ ಹಾರೈಸಿದ್ದಾರೆ. ವಿಶೇಷ ಅಂದ್ರೆ, ದರ್ಶನ್ ತಾಯಿ ಮೀನಾ ಮತ್ತು ಪತ್ನಿ ವಿಜಯಲಕ್ಷ್ಮೀ ಜೊತೆ ಕುಳಿತು ಸಿನಿಮಾ ನೋಡಿದ್ದಾರೆ. ಇಡೀ ತೂಗುದೀಪ ಫ್ಯಾಮಿಲಿ ಸದಸ್ಯರು ಒಟ್ಟಾಗಿ ಸಿನಿಮಾ ವೀಕ್ಷಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..