ಪವಿತ್ರಾ ಬಚಾವ್ ಮಾಡೋ ಭರದಲ್ಲಿ ದರ್ಶನ್‌ಗೆ ಖೆಡ್ಡಾ ರೆಡಿಯಾಯ್ತಾ?

ಹೆಣ್ಣು ಅನ್ನೋ ಕಾರಣಕ್ಕೆ ಪವಿತ್ರಾಗೆ ಬೇಲ್ ಸಿಗುವ ಸಾಧ್ಯತೆ ಕೂಡ ಇದೆ. ಜೊತೆಗೆ ಪವಿತ್ರಾ ಮಾರಣಾಂತಿಕ ಹಲ್ಲೆ ಮಾಡಿಲ್ಲ ಅನ್ನೋದನ್ನ ಪೊಲೀಸರೇ ದಾಖಲು ಮಾಡಿದ್ದಾರೆ. ಸೋ ಪವಿತ್ರಾಗೆ ಮುಂದಿನ ದಿನಗಳಲ್ಲಿ ಜಾಮೀನು ಸಿಕ್ಕರೂ ಅಚ್ಚರಿಯಿಲ್ಲ. ಮತ್ತದು ದರ್ಶನ್​ಗೆ ಕಷ್ಟ ತಂದ್ರೂ ಅಚ್ಚರಿಯಿಲ್ಲ...

First Published Dec 5, 2024, 11:26 AM IST | Last Updated Dec 5, 2024, 2:00 PM IST

ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ಎ-1 ಆಗಿರೋ ಪವಿತ್ರಾ ಗೌಡ ಬೇಲ್​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ್ದಾರೆ. ಮಂಗಳವಾರ ಪವಿತ್ರಾ ಗೌಡ ಬೇಲ್ ಅರ್ಜಿಯ ವಿಚಾರಣೆ ನಡೆದಿದ್ದು ಪವಿತ್ರಾ ಈ ಕೇಸ್​ನಲ್ಲಿ ಏನೂ ತಪ್ಪು ಮಾಡಿಲ್ಲ ಅಂತ ಪವಿತ್ರಾ ಪರ ವಕೀಲರು ವಾದ ಮಾಡಿದ್ದಾರೆ. ಹೀಗೆ ವಾದಿಸೋ ಭರದಲ್ಲಿ ತಪ್ಪೆಲ್ಲಾ ದರ್ಶನ್​ದೇ ಅಂತಲೂ ವಾದಿಸಿದ್ದಾರೆ. ಅಲ್ಲಿಗೆ ತಾವು ಬಚಾವ್ ಆಗೋಕೆ ಹೋಗಿ ದರ್ಶನ್​ ತಲೆಗೆ ಈ ಕೇಸ್ ಕಟ್ಟೋಕೆ ಸಜ್ಜಾದಂತಿದೆ.. ಪವಿತ್ರಾ ಪರ ವಕೀಲರು ಮಾಡಿರೋ ವಾದ ದರ್ಶನ್ ಬೇಲ್​ಗೆ ಮುಳುವಾಗಲಿದೆಯಾ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ.

ಯೆಸ್ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ-1 ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ಪವಿತ್ರಾ ಗೌಡ, ಬೇಲ್​ಗಾಗಿ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಂಗಳವಾರ  ಪವಿತ್ರಾ ಗೌಡ ಪರ ವಕೀಲರು ಹೈಕೋರ್ಟ್​​ನಲ್ಲಿ ವಾದ ಮಂಡನೆ ಮಾಡಿದ್ದು, ಪವಿತ್ರಾ ನಿರಪರಾಧಿ ಆಕೆಗೆ ಬೇಲ್ ಕೊಡಬೇಕು ಅಂತ ವಾದ ಮಂಡಿಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 17 ಮಂದಿ ಆರೋಪಿಗಳಿದ್ದು ಅವರಲ್ಲಿ ನಾಲ್ಕು ಮಂದಿಗೆ ಈಗಾಗಲೇ ಜಾಮೀನು ದೊರೆತಿದೆ. ಪ್ರಕರಣದ ಎರಡನೇ ಆರೋಪಿ ದರ್ಶನ್​ಗೆ ಮಧ್ಯಂತರ ಜಾಮೀನು ದೊರೆತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜಾಮೀನಿನ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉಳಿದ ಆರೋಪಿಗಳಿಗೆ ಇದರಿಂದ ಸಮಸ್ಯೆ ಆಗಿತ್ತು. ಪವಿತ್ರಾ ಸೇರಿದಂತೆ ಇತರ ಆರೋಪಿಗಳ ಪರ ವಾದ ಮಂಡನೆಗೆ ಸಹ ಸೂಕ್ತ ಕಾಲಾವಕಾಶ ಸಿಕ್ಕಿರಲಿಲ್ಲ. ಆದ್ರೆ ಮಂಗಳವಾರ ಪವಿತ್ರಾ ಗೌಡ ಪರ  ಹಿರಿಯ ವಕೀಲರಾದ ಸೆಬಾಸ್ಟಿಯನ್ ಹೈಕೋರ್ಟ್​ನಲ್ಲಿ ವಾದ ಮಂಡಿಸಿದರು. 

ಹೌದು ಪವಿತ್ರಾ ಗೌಡ ಪರ ವಾದ ಮಾಡಿದ ವಕೀಲರು ಈ ಕೇಸ್​​ನಲ್ಲಿ ಕಿಡ್ನಾಪ್, ಮಾರಣಾಂತಿಕ ಹಲ್ಲೆ ಮತ್ತು ಸಾಕ್ಷನಾಶದ ಆರೋಪ ಹೊರಿಸಲಾಗಿದೆ. ಆದ್ರೆ ಕಿಡ್ನಾಪ್ ಮಾಡಿದ್ದು ದರ್ಶನ್ ಮತ್ತು ಗ್ಯಾಂಗ್.. ಹಲ್ಲೆ ಮಾಡಿದ್ದು ಕೂಡ ಅವರೇ. ಪವಿತ್ರಾ ಶೆಡ್​ಗೆ ಬಂದು ಒಂದೇ ಒಂದು ಬಾರಿ ಹೊಡೆದಿದ್ದಾಳಷ್ಟೇ. ಇದನ್ನ ಖುದ್ದು ಪೊಲೀಸರೇ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖ ಮಾಡಿದ್ದಾರೆ. ಸೋ ಕೊಲೆಗೂ ಪವಿತ್ರಾಗೂ ಸಂಬಂಧ ಇಲ್ಲ. ಹೀಗಾಗಿ ಬೇಲ್ ಕೊಡಿ ಅಂತ ವಾದ ಮಾಡಿದ್ದಾರೆ.

ಸಾಕ್ಷಿಗಳು ನೀಡಿರುವ ಹೇಳಿಕೆಯಂತೆ ಕೇವಲ ಒಂದು ಬಾರಿ ಮಾತ್ರ ಪವಿತ್ರಾ ಹಲ್ಲೆ ಮಾಡಿದ್ದಾರೆ, ಆ ನಂತರ ಅವರನ್ನು ಮನೆಗೆ ಬಿಟ್ಟು ಬರಲಾಗಿದೆ. ಫೆಬ್ರವರಿಯಲ್ಲಿ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದಾನೆ, ಅದನ್ನು ನೋಡಿ ಪವಿತ್ರಾಗೆ ಆಘಾತವಾಗಿದೆ. ನೋವನ್ನು ಎ3 ಪವನ್​ ಬಳಿ ತೋಡಿಕೊಂಡಿದ್ದಾರೆ. ಪವನ್ ಕೆಲವರ ಸಹಾಯದಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿದ್ದಾನೆ. 

ಎ2 ದರ್ಶನ್ ಜೊತೆ ಬಂದ ಪವಿತ್ರಾ, ರೇಣುಕಾ ಕಪಾಳಕ್ಕೆ ಹೊಡೆದಿದ್ದಾರೆ, ಪವಿತ್ರಾ ಚಪ್ಪಲಿ ಪಡೆದುಕೊಂಡು ದರ್ಶನ್, ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದ ರೇಣುಕಾ ಸ್ವಾಮಿಯನ್ನು ಕರೆದುಕೊಂಡು ಬರಲಾಗಿಲ್ಲ. ಎಲ್ಲರೂ ಹೊಡೆದ ಏಟಿನಿಂದ ಅವರು ಸತ್ತಿರಬಹುದು ಆದರೆ ಕೊಲೆ ಮಾಡುವುದು ಉದ್ದೇಶ ಆಗಿರಲಿಲ್ಲ' 

ಹೌದು, ಪವಿತ್ರಾ ಗೌಡ ಪರ ವಕೀಲ ಸೆಬಾಸ್ಟಿಯನ್ ತನ್ನ ಕಕ್ಷಿದಾರೆಯನ್ನ ಬಚಾವ್ ಮಾಡೋಕೆ ಏನ್ ವಾದ ಮಾಡಬೇಕೋ ಅದನ್ನ ಮಾಡಿದ್ದಾರೆ. ಆದ್ರೆ ಪವಿತ್ರಾ ಬಚಾವ್ ಮಾಡೋ ಭರದಲ್ಲಿ ದರ್ಶನ್​ರನ್ನು ಈ ಕೇಸ್​​ನಲ್ಲಿ ಸಿಲುಕಿಸುವಂತೆ ಕಾಣ್ತಾ ಇದೆ. ಇದು ದರ್ಶನ್ ಬೇಲ್ ಮೇಲೆ ಕೂಡ ಪರಿಣಾಮ ಬೀರುವ ಸಾಧ್ಯತೆ ಇದೆ.

ಪವಿತ್ರಾರನ್ನು ಈ ಕೇಸ್​​ನಲ್ಲಿ ಸಿಲುಕಿಸಲಾಗಿದೆ. ಅವರನ್ನು ಎ-1 ಆಗಿಸಿರೋದು ದೊಡ್ಡ ತಪ್ಪು ಎಂದಿರೋ ವಕೀಲರು, ಅವರಿಗೆ ತ್ವರಿತ ಬೇಲ್ ನೀಡಿ ಎಂದು ಮನವಿ ಮಾಡಿದ್ದಾರೆ. ಪವಿತ್ರಾಗೌಡಗೆ 9ನೇ ತರಗತಿ ಓದುತ್ತಿರುವ ಮಗಳಿದ್ದಾಳೆ, ವಯಸ್ಸಾದ ತಾಯಿ ಇದ್ದಾರೆ. ಹೀಗಾಗಿ ಜಾಮೀನು ನೀಡಬೇಕು ಅಂತ ಸೆಬಾಸ್ಟಿಯನ್ ಮನವಿ ಮಾಡಿದ್ದಾರೆ.

ಹೆಣ್ಣು ಅನ್ನೋ ಕಾರಣಕ್ಕೆ ಪವಿತ್ರಾಗೆ ಬೇಲ್ ಸಿಗುವ ಸಾಧ್ಯತೆ ಕೂಡ ಇದೆ. ಜೊತೆಗೆ ಪವಿತ್ರಾ ಮಾರಣಾಂತಿಕ ಹಲ್ಲೆ ಮಾಡಿಲ್ಲ ಅನ್ನೋದನ್ನ ಪೊಲೀಸರೇ ದಾಖಲು ಮಾಡಿದ್ದಾರೆ. ಸೋ ಪವಿತ್ರಾಗೆ ಮುಂದಿನ ದಿನಗಳಲ್ಲಿ ಜಾಮೀನು ಸಿಕ್ಕರೂ ಅಚ್ಚರಿಯಿಲ್ಲ. ಮತ್ತದು ದರ್ಶನ್​ಗೆ ಕಷ್ಟ ತಂದ್ರೂ ಅಚ್ಚರಿಯಿಲ್ಲ.

ಒಟ್ಟಾರೆ ತಪ್ಪು ಮಾಡುವಾಗ ಒಟ್ಟಿಗೆ ಇದ್ದ ಜೋಡಿ ಈಗ ತಾವು ಬಚಾವ್ ಆದ್ರೆ ಸಾಕು ಅಂತ ಪರದಾಡ್ತಾ ಇದ್ದಾರೆ. ಉಳಿದವರು ಹೇಗಾದ್ರೂ ಹಾಳಾಗೋಗ್ಲಿ ನಾವ್ ಬಚಾವ್ ಆದ್ರೆ ಸಾಕು ಅಂತಿದ್ದಾರೆ. ಒಟ್ಟಾರೆ ಈ ಡಿ ಗ್ಯಾಂಗ್ ಡ್ರಾಮಾಯಣ ಇನ್ನೂ ಎಲ್ಲಿಗೆ ಹೋಗಿ ತಲುಪುತ್ತೋ ಗೊತ್ತಿಲ್ಲ. ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ..  

Video Top Stories