Milana Nagaraj : ಹೊಸ ಮನೆ ಖರೀದಿಸಿದ 'ಡಾರ್ಲಿಂಗ್' ದಂಪತಿ: ಹೇಗಿದೆ ಗೊತ್ತಾ 'ಕ್ರಿಸ್ಮಿ ನೆಸ್ಟ್' ?

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿ ಹೊಸ ಮನೆ ಖರೀದಿಸಿದ್ದು, ಗೃಹ ಪ್ರವೇಶ ಕೂಡ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ ವುಡ್‌'ನ ಸ್ಟಾರ್‌ ಜೋಡಿ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಚಿತ್ರರಂಗದಲ್ಲಿ ಕಷ್ಟ ಪಟ್ಟು ಸ್ಟಾರ್ ಪಟ್ಟಕ್ಕೇರಿದವರು. ಈ ತಾರಾ ಜೋಡಿ ತಮ್ಮ ಸಿನಿಮಾ ಸಕ್ಸಸ್ ಟ್ರ್ಯಾಕ್'ನ್ನು ತಾವೇ ಹಾಕಿಕೊಂಡಿದ್ದಾರೆ. ಅದರಲ್ಲೂ ಲವ್ ಮಾಕ್ಟೆಲ್ ಸಿನಿಮಾ ಬಂದ ಮೇಲೆ ನಟ ಡಾರ್ಲಿಂಗ್ ಕೃಷ್ಣ ಕೋಟಿ ಸಂಭಾವನೆ ಪಡೆಯೋ ನಟರ ಸಾಲಿಗೆ ಸೇರಿದ್ದಾರೆ. ಇದೀಗ ಇವರ ಬಣ್ಣದ ಬದುಕಿನ ಶ್ರಮದ ಫಲ ಹೊಸ ಮನೆಗೆ ಬಂದಿದ್ದಾರೆ. ಮದುವೆ ಆಗಿ ಒಂದುವರೆ ವರ್ಷದ ಬಳಿಕ ಈ ತಾರಾ ದಂಪತಿ ಹೊಸ ಮನೆ ಖರೀದಿಸಿದ್ದು, ಗೃಹಪ್ರವೇಶದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಮಿಲನಾ ನಾಗರಾಜ್ ಡಾರ್ಲಿಂಗ್ ಕೃಷ್ಣ ತಮ್ಮ ನೂತನ ಮನೆಗೆ 'ಕ್ರಿಸ್ಮಿ ನೆಸ್ಟ್' ಎಂದು ಹೆಸರಿಟ್ಟಿದ್ದಾರೆ. 'ಕೃಷ್ಣ ಹಾಗೂ ಮಿಲನ ಗೂಡು' ಎಂಬರ್ಥವನ್ನು ಈ ಹೆಸರು ಕೊಡುತ್ತೆ. ಬೆಂಗಳೂರಿನ ಓರಯಾನ್ ಮಾಲ್ ಎದುರು ಇರೋ ಪ್ರತಿಷ್ಠಿತ ಅಪಾರ್ಟ್ಮೆಂಟ್ ಒಂದರಲ್ಲಿ ಮನೆ ಖರೀದಿಸಿದ್ದು, ಇದಕ್ಕೆ ಬರೋಬ್ಬರಿ 5 ಕೋಟಿ ಇನ್ವೆಸ್ಟ್ ಮಾಡಿದ್ದಾರೆ.

Tunisha Sharma 20 ವರ್ಷಕ್ಕೆ ಬದುಕು ಅಂತ್ಯಗೊಳಿಸಿದ ನಟಿ, ಕಾರಣ ನಿಗೂ ...

Related Video