ರಶ್ಮಿಕಾರಿಂದ ನ್ಯಾಷನಲ್ ಕ್ರಶ್ ಪಟ್ಟ ಕಿತ್ತುಕೊಂಡ್ರಾ ಆ ನಟಿ..?

ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವ್ರಿಗೆ ಅಭಿಮಾನಿಗಳು ನ್ಯಾಷನಲ್ ಕ್ರಶ್ ಅನ್ನೋ ಪಟ್ಟ ಕೊಟ್ಟಿದ್ದಾರೆ. ಈಗ ಅದೇ ಅಭಿಮಾನಿ ಬಳಗ ಅವ್ರನ್ನ ಬಿಟ್ಟು ಮತ್ತೊರ್ವ ನಟಿಯನ್ನ ನ್ಯಾಷನಲ್ ಕ್ರಶ್ (National Crush) ಎಂದು ಕರೆಯೋದಕ್ಕೆ ಶುರು ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವ್ರಿಗೆ ಅಭಿಮಾನಿಗಳು ನ್ಯಾಷನಲ್ ಕ್ರಶ್ ಅನ್ನೋ ಪಟ್ಟ ಕೊಟ್ಟಿದ್ದಾರೆ. ಈಗ ಅದೇ ಅಭಿಮಾನಿ ಬಳಗ ಅವ್ರನ್ನ ಬಿಟ್ಟು ಮತ್ತೊರ್ವ ನಟಿಯನ್ನ ನ್ಯಾಷನಲ್ ಕ್ರಶ್ (National Crush) ಎಂದು ಕರೆಯೋದಕ್ಕೆ ಶುರು ಮಾಡಿದ್ದಾರೆ. ಸಹಜ ನಟನೆಯಿಂದಲೇ ಅಭಿಮಾನಿಗಳ ಮನಸ್ಸು ಗೆದ್ದಿರೋ ನಟಿ ಸಾಯಿ ಪಲ್ಲವಿ ಅವ್ರನ್ನ ಈಗ ನೆಟ್ಟಿಗರು ನೀವು ನಿಜವಾದ ನ್ಯಾಷನಲ್ ಕ್ರಶ್ ಅಂತಿದ್ದಾರೆ.

ಹೊರಬಿತ್ತು ಕೆಜಿಎಫ್-2, RRR ಕಲೆಕ್ಷನ್, ಸಡ್ಡು ಹೊಡೆದ್ರಾ ರಾಕಿಭಾಯ್..?

ನಟಿ ಸಾಯಿ ಪಲ್ಲವಿ ಅಭಿನಯದ ವಿರಾಟ ಪರ್ವಂ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ವಿರಾಟ ಪರ್ವಂ ಸಿನಿಮಾದ ದೃಶ್ಯವೊಂದರಲ್ಲಿ ಪಲ್ಲವಿ ಎರಡು ದಿನಗಳ ಕಾಲ ಊಟ ಮಾಡಿರುವುದಿಲ್ಲ.ಆ ಪಾತ್ರ ನೈಜವಾಗಿ ಬರಬೇಕೆಂದು ಎರಡು ದಿನಗಳ ಕಾಲ ಊಟ ಬಿಟ್ಟು ಚಿತ್ರೀಕರಣ ಮಾಡಿದ್ದಾರಂತೆ ಸಾಯಿ ಪಲ್ಲವಿ. ಈ ವಿಚಾರವನ್ನ ನಿರ್ದೇಶಕರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದನ್ನ ತಿಳಿದ ಸಿನಿಮಾ ಪ್ರೇಮಿಗಳು ನೀನಮ್ಮ ನಿಜವಾದ ನ್ಯಾಷನಲ್ ಕ್ರಶ್ ಎಂದಿದ್ದಾರೆ.

ರಾಕಿ ಪಾತ್ರ ಮಾಡಬೇಕಿದ್ದ ಆ ಬಿಗ್ ಸ್ಟಾರ್ ಯಾರು? ವೈರಲ್ ಆಗ್ತಿದೆ ಹೊಸ ಕತೆ!

ಅದ್ಯಾಕೋ ನಟಿ ರಶ್ಮಿಕಾ ಮಂದಣ್ಣ ಸುಮ್ಮನಿದ್ರು ಕೂಡ ಟ್ರೋಲಿಗರಿಗೆ ಆಹಾರವಾಗ್ತಾನೆ ಇರ್ತಾರೆ. ಈಗ ಸಾಯಿ ಪಲ್ಲವಿ ವಿಚಾರದಲ್ಲಿ ನೆಟ್ಟಿಗರು ರಶ್ಮಿಕಾಗೆ ಕ್ಲಾಸ್ ತೆಗೆದುಕೊಳ್ತಿದ್ದಾರೆ...ಸಣ್ಣ ಪುಟ್ಟ ಪಾತ್ರ ಮಾಡಿ ಕೊಂಬು ಬೆಳೆದು ಭಾಷೆ ಮರೆಯುವ ಜನರ ನಡುವೆ ಎರಡು ದಿನಗಳ ಕಾಲ ಊಟ ತ್ಯಾಗ ಮಾಡಿ ಪಾತ್ರ ಮಾಡುವ ನಟಿನೇ ರಿಯಲ್ ಕ್ರಶ್ ಎಂದಿದ್ದಾರೆ.

Related Video