ಅಭಿನಯ ಶಾರದೆ ಜಯಂತಿ 'ಲೌವ್ಲಿ ಬಟ್ ಲೋನ್ಲಿ' ಪುಸ್ತಕ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಅಭಿನಯ ಶಾರದೆ ದಿವಂಗತ ಜಯಂತಿ ಅವರ ಬಗ್ಗೆ ಮೊದಲ ಜೀವನ ಗಥೆ 'ಲೌವ್ಲಿ ಬಟ್ ಲೋನ್ಲಿ' ಅನ್ನೋ ಪುಸ್ತಕ ಬಿಡುಗಡೆ ಆಗಿದೆ. ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರೋ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ ಎಂ ಸಿದ್ಧರಾಮಯ್ಯ ಜಯಂತಿಯವರ ಕೃತಿ ಬಿಡುಗಡೆ ಮಾಡಿದ್ರು. ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗು ಸಾಹಿತಿ ಕೆ ಸದಾಶಿವ ಶಣೈ ಲೌಲ್ಲಿ ಬಟ್ ಲೋನ್ಲಿ ಪುಸ್ತಕ ಬರೆದಿದ್ದಾರೆ.
ಅಭಿನಯ ಶಾರದೆ ದಿವಂಗತ ಜಯಂತಿ ಅವರ ಬಗ್ಗೆ ಮೊದಲ ಜೀವನ ಗಥೆ 'ಲೌವ್ಲಿ ಬಟ್ ಲೋನ್ಲಿ' ಅನ್ನೋ ಪುಸ್ತಕ ಬಿಡುಗಡೆ ಆಗಿದೆ. ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರೋ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ ಎಂ ಸಿದ್ಧರಾಮಯ್ಯ ಜಯಂತಿಯವರ (Abhinaya Sharade Jayanthi) ಕೃತಿ ಬಿಡುಗಡೆ ಮಾಡಿದ್ರು. ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗು ಸಾಹಿತಿ ಕೆ ಸದಾಶಿವ ಶಣೈ ಲೌಲ್ಲಿ ಬಟ್ ಲೋನ್ಲಿ ಪುಸ್ತಕ ಬರೆದಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಹಿರಿಯ ನಟ ಶ್ರೀನಾಥ್ ವಹಿಸಿಕೊಂಡಿದ್ರು, ಉಳಿದಂತೆ ನಟ ರಮೇಶ್ ಅರವಿಂದ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಇಂದ್ರಜಿತ್ ಲಂಕೇಶ್, ಕವಿತಾ ಲಂಕೇಶ್, ಹಿರಿಯ ಪತ್ರಕರ್ತ ಸಮಿವುಲ್ಲ, ನಟಿ ಪ್ರೇಮಾ, ಪೂಜಾ ಗಾಂಧಿ, ಭಾವನಾ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರು ಭಾಗಿ ಆಗಿದ್ರು.