Asianet Suvarna News

ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ನಿಂತ ಕಿಚ್ಚ ಸುದೀಪ್

May 27, 2021, 1:12 PM IST

ಕೊರೋನಾ ಸಂಕಷ್ಟ ಕಾಲದಲ್ಲಿ ನಟ ಕಿಚ್ಚ ಸುದೀಪ್ ಶಿಕ್ಷಕರಿಗೆ ನೆರವಾಗುತ್ತಿದ್ದಾರೆ. ಖಾಸಗಿ ಶಾಲೆಯ ಶಿಕ್ಷಕರಿಗೆ ಕೊರೋನಾ ಸಂಕಷ್ಟ ಕಾಲದಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದು ಕಿಚ್ಚ ಧೈರ್ಯ ತುಂಬಿದ್ದಾರೆ. ಮೊದಲ ಹಂತದಲ್ಲಿ ಕರ್ನಾಟಕದಲ್ಲಿ ಕಷ್ಟದಲ್ಲಿರುವ ಶಿಕ್ಷಕರಿಗೆ 2 ಸಾವಿರದಂತೆ ನೆರವು ನೀಡಿದ್ದಾರೆ.

ಶಿಕ್ಷಕರಿಗೆ ಕಿಚ್ಚ ಸುದೀಪ್ ಆರ್ಥಿಕ ನೆರವು.

ಮುಂದಿನ ದಿನಗಳಲ್ಲಿ ಈ ನೆರವನ್ನು ಇನ್ನಷ್ಟು ವಿಸ್ತರಿಸಲು ಉದ್ದೇಶಿಲಾಗಿದೆ. ಕೊರೋನಾ ಲಾಕ್‌ಡೌನ್ ಸಂದರ್ಭ ಬಹಳಷ್ಟು ಸೆಲೆಬ್ರಿಟಿಗಳು ಬಡ ಜನರ ನೆರವಿಗೆ ಬಂದಿದ್ದು, ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ.