ಯುವ 'ಎಕ್ಕ' ಹಿಂದೆ ಚಿಕ್ಕಮ್ಮ, ಧೀರೆನ್ ಹಿಂದೆ ದೊಡ್ಡಮ್ಮ; ದೊಡ್ಮನೆಗೆ ಶಕ್ತಿಯಾದ ಸೊಸೆಯಂದಿರು!

ಚಿಕ್ಕಮ್ಮ ಅಶ್ವಿನಿ ಅಪ್ಪು ನಂತರ ಪಿಆರ್​ಕೆ ಪ್ರೊಡಕ್ಷನ್ ಸಂಸ್ಥೆಯನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈಗ ತನ್ನ ಮುದ್ದು ಮಗನ ಬೆಂಬಲಕ್ಕೆ ನಿಂತಿದ್ದಾರೆ. ಯುವನನ್ನ ಅಶ್ವಿನಿಯ ದತ್ತು ಪುತ್ರ ಅಂತ ಕರೀತಾರೆ. ಈಗ ಅಶ್ವಿನಿ ಯುವನಿಗೆ ಎಕ್ಕ ಸಿನಿಮಾ ನಿರ್ಮಾಣ..

First Published Dec 8, 2024, 12:25 PM IST | Last Updated Dec 8, 2024, 12:32 PM IST


ದೊಡ್ಮನೆ ಫ್ಯೂಚರ್​ ಸೂಪರ್​​ ಸ್ಟಾರ್ಸ್​ಗಳಂದ್ರೆ ಒಬ್ರು ಯುವ ರಾಜ್ ಕುಮಾರ್ (Yuva Rajkumar), ಮತ್ತೊಬ್ರು ಧೀರೆನ್ ರಾಮ್‌ಕುಮಾರ್ (Dheeren Ramkumar). ಈಗ ಇವರಿಬ್ಬರು ಎರಡನೇ ಹೆಜ್ಜೆ ಇಡೋಕೆ ರೆಡಿಯಾಗುತ್ತಿದ್ದಾರೆ. ಇವರಿಬ್ಬರ ಎರಡನೇ ಹೆಜ್ಜೆ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಆದ್ರೆ ಅದೆಲ್ಲದಕ್ಕಿಂತ ವಿಶೇಷವಾಗಿ ಗಮನ ಸೆಳೆಯುತ್ತಿರೋದು ಇಬ್ಬರಿಗೂ ಶಕ್ತಿಯಾಗಿ ನಿಂತಿರೋ ದೊಡ್ಮನೆಯ ಸೊಸೆಯಂದಿರೂ.. ಈ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ..

ಕನ್ನಡ ಚಿತ್ರರಂಗ ಅಂದ್ರೆನೆ ದೊಡ್ಮನೆ, ಡಾಕ್ಟರ್ ರಾಜ್ ಕುಮಾರ್.. ಅಣ್ಣಾವ್ರು ಕರ್ನಾಟಕದ ಸಾಂಸ್ಕೃತಿಕ ರಾಯ ಭಾರಿ. ಬಣ್ಣದ ಸಂಸ್ಕೃತಿಯನ್ನ ಜಗತ್ತಿಗೆ ಸಾರಿದ ಮಹಾನ್ ನಾಯಕ.. ಡಾಕ್ಟರ್ ರಾಜ್ ಕುಮಾರ್ ನಂತರ ಆ ಲೆಗೆಸಿಯನ್ನ ಮುಂದುವರೆಸಿದ್ದು ಶಿವರಾಜ್ ಕುಮಾರ್, ಪುನೀತ್ ರಾಜ್​ ಕುಮಾರ್,​ ರಾಘವೇಂದ್ರ ರಾಜ್​ ಕುಮಾರ್...

ತಂದಗೆ ತಕ್ಕ ಮಕ್ಕಳಾಗಿ ಕನ್ನಡ ಚಿತ್ರರಂಗಕ್ಕೆ ಪಿಲ್ಲರ್ ಆಗಿ ನಿಂತುಕೊಂಡಿದ್ರು ಅಪ್ಪು. ಇಂದು ನಮ್ಮೊಂದಿಗೆ ಅಪ್ಪು ಇಲ್ಲದಿದ್ರು ಅವರ ಸಿನಿಮಾಗಳು ನಮಗೆ ಎಂದೆಂದಿಗೂ ಸ್ಪೂರ್ತಿಯೇ, ಇತ್ತ ಶಿವರಾಜ್ ಕುಮಾರ್ ವಯಸ್ಸು 60 ದಾಟಿದ್ರೂ ಅವರ ಕೊಡುಗೆ ಇಂದಿಗೂ ಕಂಟಿನ್ಯೂ ಆಗುತ್ತಿದೆ. ಇದೀಗ ಆ ಪರಂಪರೆಯನ್ನ ಕಂಟಿನ್ಯೂ ಮಾಡುತ್ತಿರೋದು ಡಾಕ್ಟರ್ ರಾಜ್​ ಕುಮಾರ್​ ಮುದ್ದಿನ ಮೊಮ್ಮಕ್ಕಳು.  

ಯುವ ಸಿನಿಮಾದಿಂದ ಸ್ಯಾಂಡಲ್​ವುಡ್​ನಲ್ಲಿ ಹೊಸ ಭರವಸೆ ಹುಟ್ಟಿಸಿರೋ ಹುಡುಗ ಯುವ ರಾಜ್​ಕುಮಾರ್... ಯುವ ನಾನೊಬ್ಬ ನಟ ಅಂತ ಫಸ್ಟ್​ ಸಿನಿಮಾದಲ್ಲೇ ಪ್ರ್ಯೂ ಮಾಡಿದ್ದಾರೆ. ಯುವನಿಗೆ ದೊಡ್ಮನೆ ಫ್ಯಾನ್ಸ್ ಆಶೀರ್ವಾದ ಇದೆ. ಈಗ ಯುವ ತನ್ನ ಎರಡನೇ ಸಿನಿಮಾಗೆ ಸಜ್ಜಾಗಿದ್ದಾರೆ. ಎಕ್ಕ ಸಿನಿಮಾದಲ್ಲಿ ಪಕ್ಕಾ ಲೋಕಲ್ ಮಾಸ್ ಹುಡುಗನಾಗಿದ್ದಾರೆ. ಆದ್ರೆ ಇಲ್ಲಿನ ಇಂಟ್ರೆಸ್ಟಿಂಗ್ ಮ್ಯಾಟರ್ ಏನಪ್ಪ ಅಂದ್ರೆ ಯುವನಿಗೆ ಶಕ್ತಿಯಾಗಿ ನಿಂತಿರೋದು ಅಪ್ಪುವಿನ ಧರ್ಮ ಪತ್ನಿ, ಯುವಗೆ ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್ ಕುಮಾರ್.. 

ಚಿಕ್ಕಮ್ಮ ಅಶ್ವಿನಿ ಅಪ್ಪು ನಂತರ ಪಿಆರ್​ಕೆ ಪ್ರೊಡಕ್ಷನ್ ಸಂಸ್ಥೆಯನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈಗ ತನ್ನ ಮುದ್ದು ಮಗನ ಬೆಂಬಲಕ್ಕೆ ನಿಂತಿದ್ದಾರೆ. ಯುವನನ್ನ ಅಶ್ವಿನಿಯ ದತ್ತು ಪುತ್ರ ಅಂತ ಕರೀತಾರೆ. ಈಗ ಅಶ್ವಿನಿ ಯುವನಿಗೆ ಎಕ್ಕ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 

ಡಾಕ್ಟರ್ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ನಿರ್ಮಾಪಕಿ ಅನ್ನೋದು ಗೊತ್ತಿರೋ ವಿಚಾರ. ನಿರ್ಮಾಪಕಿ ಆಗಿ ಭೈರತಿ ರಣಗಲ್ ಸಿನಿಮಾ ಸಕ್ಸಸ್​​ನಲ್ಲಿರೋ ಗೀತಾ ಶಿವರಾಜ್​ ಕುಮಾರ್ ತನ್ನ ಅಳಿಯನಿಗೆ ಸಾಥ್ ಕೊಟ್ಟಿದ್ದಾರೆ. ರಾಮ್​​​ಕುಮಾರ್ ಪುತ್ರ ಧೀರನ್​ ರಾಜ್​ ಕುಮಾರ್ ನಟನೆಯ ಎರಡನೇ ಸಿನಿಮಾಗೆ ಗೀತಾ ಶಿವರಾಜ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ.

ಅಂದು ಕನ್ನಡದ ಚಿತ್ರರಂಗ, ರಾಜ್​ ಕುಮಾರ್ ಮತ್ತವರ ಮಕ್ಕಳ ಶಕ್ತಿಯಾಗಿ ನಿಂತವರು ಪಾರರ್ವತ್ಮ ರಾಜ್​ ಕುಮಾರ್.. ನಿರ್ಮಾಣ ಸಂಸ್ಥೆ ಹುಟ್ಟುಹಾಕಿ ಅದ್ಭುತ ಸಿನಿಮಾಗಳನ್ನ ಕೊಟ್ಟ ಕೀರ್ತಿ ಪಾರ್ವತಮ್ಮರದ್ದು. ಈಗ ಪಾರ್ವತಮ್ಮನವರ ಸೊಸೆಯಂದಿರೂ ಕೂಡ ದೊಡ್ಮನೆ ಮೊಮ್ಮಕ್ಕಳಿಗೆ  ಶಕ್ತಿಯಾಗಿ ನಿಂತಿದ್ದಾರೆ. ಅಶ್ವೀನಿ ಪುನೀತ್ ಯುವರಾಜ್ ಕುಮಾರ್ ಬೆನ್ನ ಹಿಂದೆ ಇದ್ರೆ, ಗೀತಾ ಶಿವರಾಜ್​ಕುಮಾರ್ ಧೀರನ್ ಬೆನ್ನ ಹಿಂದೆ​ ನಿಂತಿದ್ದಾರೆ. ಈ ಎರಡು ಶಕ್ತಿಗಳ ಆಶೀರ್ವಾದದಿಂದ ಈ ಯಂಗ್ ಹೀರೋಗಳು ಸೂಪರ್ ಸ್ಟಾರ್​​ಗಳಾಗೋ ಕನಸು ಕಂಡಿದ್ದಾರೆ.