ಆರ್ಮುಗಂ ರವಿಶಂಕರ್ ಏನಂದ್ರು? ಸುವರ್ಣ ನ್ಯೂಸ್‌ನಲ್ಲಿ ಬಂದ ಕನ್ನಡದ ರವಿ!

ಸಿನಿಮಾ ನಟನೆ ಜೊತೆಜೊತೆಗೆ ಬಹಳಷ್ಟು ಭಾಷೆಗಳ ಸಿನಿಮಾಗಳಿಗೆ ಡಬ್ಬಿಂಗ್ ಮಾಡಿರುವ ಕೀರ್ತಿ ಸಹ ನಟ ರವಿಶಂಕರ್ ಬೆನ್ನಿಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ 'ಕೆಂಪೇಗೌಡ' ಚಿತ್ರದಲ್ಲಿ ಅವರು ಮಾಡಿರುವ ಆರ್ಮುಗಂ ಪಾತ್ರ ಭಾರೀ..

Share this Video
  • FB
  • Linkdin
  • Whatsapp

ಆರ್ಮುಗಂ ಖ್ಯಾತಿಯ ನಟ ರವಿಶಂಕರ್ ಯಾರಿಗೆ ಗೊತ್ತಿಲ್ಲ? ತೆಲುಗು ಮೂಲದ ನಟನಾದರೂ ರವಿಶಂಖರ್‌ ಕನ್ನಡ ಸಿನಿಪ್ರೇಕ್ಷಕರಿಗೂ ಅಚ್ಚುಮೆಚ್ಚು! ರವಿಶಂಕರ್ ಅಣ್ಣ ಸಾಯಿಕುಮಾರ್ ಸಹ ಕನ್ನಡದಲ್ಲಿ ಬಹಳಷ್ಟು ಸಿನಿಮಾ ಮಾಡಿ, ಕನ್ನಡದವರಾ ಅಥವಾ ತೆಲುಗಿನವರಾ ಎಂಬ ಸಂದೇಹ ಮೂಡಿಸುವಷ್ಟು ಕನ್ನಡಿಗರೇ ಆಗಿದ್ದಾರೆ. 

ನಟ ರವಿಶಂಕರ್ ಹೇಳುವ ಪ್ರಕಾರ ಅವರಿಗೆ ಕನ್ನಡದಿಂದಲೇ ಅವಕಾಶ, ಕನ್ನಡದಲ್ಲೇ ಚಿತ್ರ ಭವಿಷ್ಯ..! ತಾಯಿ ಮಾತು ತೆಲುಗು, ಅನ್ನ ಕೊಟ್ಟ ಮಾತು ಕನ್ನಡ..!' ನಟನೆಯಲ್ಲಿ ಮೂರು ತಲೆಮಾರು ಕಳೆದಿರುವ ನಟ ರವಿಶಂಕರ್ ಅವರು , ಕನ್ನಡದಿಂದಲೇ ಸಿನಿಮಾರಂಗದಲ್ಲಿ ಕಾರುಬಾರು ನಡೆಸಿದವರು ಎನ್ನಬಹುದು..!

ಸಿನಿಮಾ ನಟನೆ ಜೊತೆಜೊತೆಗೆ ಬಹಳಷ್ಟು ಭಾಷೆಗಳ ಸಿನಿಮಾಗಳಿಗೆ ಡಬ್ಬಿಂಗ್ ಮಾಡಿರುವ ಕೀರ್ತಿ ಸಹ ನಟ ರವಿಶಂಕರ್ ಬೆನ್ನಿಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ 'ಕೆಂಪೇಗೌಡ' ಚಿತ್ರದಲ್ಲಿ ಅವರು ಮಾಡಿರುವ ಆರ್ಮುಗಂ ಪಾತ್ರ ಭಾರೀ ಜನಪ್ರಿಯತೆ ಪಡೆಯಿತು. ಅಲ್ಲಿಂದ ಮುಂದೆ ಅವರು ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಂದರ್ಶನದಲ್ಲಿ ಅವರೇನು ಹೇಳಿದ್ದಾರೆ ನೋಡಿ..

Related Video