ಕುತಂತ್ರ ಮಾಡುವ ಸಾವಿರ ಕೈಗಳ ವಿರುದ್ದ ಸಿಡಿದೆದ್ದ ಸುಬ್ಬಿ, ಮತ್ತೆ ಶುರುವಾಯ್ತು ಸೋಷಿಯಲ್ ಮಿಡಿಯಾ ಕಿತ್ತಾಟ!

 ಪವಿತ್ರಾ ತನ್ನ ವಿರುದ್ದ ಕುತಂತ್ರ ಮಾಡುವವರ ವಿರುದ್ದ ಕುಟುಕಿದ್ದಾಳೆ. ಅಷ್ಟಕ್ಕೂ ಈಕೆ ವಿರುದ್ದ ಕುತಂತ್ರ ಮಾಡಿದ್ಯಾರು..? ಸುಬ್ಬಿ ಸಿಡಿದೆದ್ದಿದ್ದು ಯಾರ ವಿರುದ್ದ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ.
 

Sushma Hegde  | Published: Jan 30, 2025, 4:41 PM IST

ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ಎ-1 ಆರೋಪಿಯಾಗಿ ಜೈಲು ಸೇರಿದ್ದ ಪವಿತ್ರಾ ಗೌಡ ಬೇಲ್ ಪಡೆದು ಆಚೆ ಬಂದಿದ್ದಾಳೆ. ತನ್ನ ರೆಡ್ ಕಾರ್ಪೆಟ್ ಸ್ಟುಡಿಯೋ ಬೊಟಿಕ್​ನೂ ಮರುಪ್ರಾರಂಭ ಮಾಡಿದ್ದಾಳೆ. ಈ ನಡುವೆ ಪವಿತ್ರಾ ತನ್ನ ವಿರುದ್ದ ಕುತಂತ್ರ ಮಾಡುವವರ ವಿರುದ್ದ ಕುಟುಕಿದ್ದಾಳೆ. ಪವಿತ್ರಾ ಭರ್ತಿ 6 ತಿಂಗಳು ಪರಪ್ಪನ ಅಗ್ರಹಾರದಲ್ಲಿ ಮಹಿಳಾ ಬ್ಯಾರಕ್​ನಲ್ಲಿ ಕಣ್ಣೀರು ಸುರಿಸಿದ್ದಳು. ಈ ಕೇಸ್​​ನಲ್ಲಿ ದರ್ಶನ್​ ಮಾಡಿದ ಕುಕೃತ್ಯಕ್ಕೆ ಪವಿತ್ರಾಳೇ ಕಾರಣ ಅಂತ ಎಲ್ಲರೂ ಈಕೆಗೆ ಶಾಪ ಹಾಕ್ತಾ ಇದ್ರು. ಮೈಮೇಲೆ ಬಂದ ಕೊಲೆ ಆರೋಪ, ಜನರ ನಿಂದನೆಗಳ ಶರಪಂಜರದಲ್ಲಿ ಸಿಲುಕಿ ಪವಿತ್ರಾ ನಲುಗಿ ಹೋಗಿದ್ದಳು.
 

Read More...