ಆಶಿಕಾ ರಂಗನಾಥ್ ಝೀರೋ ಫಿಗರ್ ಸೌಂದರ್ಯದ ಗುಟ್ಟು ಇದು!

ಸ್ಯಾಂಡಲ್​ವುಡ್ ನ ಝೀರೋ ಫಿಗರ್ ಹೀರೋಯಿನ್ ಆಶಿಕಾ ರಂಗನಾಥ್ ಅವರ ಸೌಂದರ್ಯದ ಗುಟ್ಟು ಜಿಮ್ ವರ್ಕೌಟ್. ಕ್ರೇಜಿ ಬಾಯ್ ಸಿನಿಮಾ ಮೂಲಕ ಬಂದ ಆಶಿಕಾ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್​ವುಡ್​ನಲ್ಲಿ ಈಗ ಝೀರೋ ಫಿಗರ್ ಯಾವ್ ಹೀರೋಯಿನ್ನು ಅಂತ ಹುಡುಕಿದ್ರೆ ಕಣ್ಣಿಗೆ ಕಾಣೋ ಗೊಂಬೆ ಆಶಿಕಾ ರಂಗನಾಥ್. ಅಲಿಯಾಸ್ ಪಟಾಕಿ ಪೋರಿ. ನೀಳಕಾಯದ ದೇಹಸಿರಿ, ಕಟ್ಟು ಮಸ್ತು ಮೈ ಕಟ್ಟು ಇಟ್ಟಿರೋ ಆಶಿಕಾ ಸೌಂದರ್ಯದ ಗುಟ್ಟು ಜೆಸ್ಟ್ ವರ್ಕೌಟು. 

ಶಿಲಾ ಬಾಲಿಕೆ ಆಶಿಕಾ ಝೀರೋ ಫಿಗರ್​ ಮೆಂಟೈನ್ ಮಾಡೋ ಸುಂದ್ರಿ. ಮೈ ಮೇಲೆ ಒಂದ್ ಹನಿ ನೀರು ಬಿದ್ರು ಹಾಗೆ ಸರನೆ ಜಾರಿ ಬಿಡೋ ತರದ ಮೈ ಕಟ್ಟಿನ ಬ್ಯೂಟಿ. ಒಬ್ಬ ಹೀರೋಯಿನ್ ತೆರೆ ಮೇಲೆ ಇಷ್ಟ ಆಗೋಕೆ ಯಾವ್ ತರಡ ಮೈ ಮಾಟ ಬೇಕೋ ಅದನ್ನ ಜಿಮ್​​ನಲ್ಲಿ ಬೆವರು ಹರಿಸಿ ರೆಡಿ ಮಾಡಿದ್ದಾರೆ. ಆಶಿಕಾ ಮೈ ಕಟ್ಟಲ್ಲಿ ಒಂದ್ ಗ್ರಾಂ ಹೆಚ್ಚು ಕಮ್ಮಿ ಆಗದಂತೆ ನೋಡಿಕೊಳ್ತಾರೆ. ಹೀಗಾಗೆ ಆಶಿಕಾ ಇಷ್ಟೊಂದು ಬಳುಕೋ ಬಾಲೆ ತರ ಕಾಣಿಸ್ತಾರೆ. 

ಕ್ರೇಜಿ ಬಾಯ್‌ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಬಂದ ಈ ಕ್ರೇಜಿ ಗರ್ಲ್​ ಆಶಿಕಾ. ಜೆಸ್ಟ್​ 9 ವರ್ಷದಲ್ಲಿ 17ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಆಶಿಕಾ ಈಗ ಸ್ಯಾಂಡಲ್​ವುಡ್​ನ ಅಸೆಟ್ ಆಗಿದ್ದಾರೆ. ಇವಳ ಬ್ಯೂಟಿಗೆ ಪಡ್ಡೆ ಹುಡುಗರು ಆಶಿಕಾ ನೀನು ಆಕಾಶದಷ್ಟೇ ಸುಂದರ ಎನ್ನುತ್ತಿದ್ದಾರೆ.

Related Video