ಅಪ್ಪು ಬಂದಿದ್ದು ಗಂಧದ ಗುಡಿ ಮಾಡುವುದಕ್ಕೆ: ರಾಘಣ್ಣ ಭಾವುಕ ನುಡಿ
ಅಪ್ಪು ಯಾಕೆ ರಾಜ್ ಕುಮಾರ್ ಮಗನಾಗಿ ಹುಟ್ಟಿದ ಹಾಗೂ ಯಾಕೆ ಸಿನಿಮಾಗೆ ಬಂದ ಎಂದು ನನಗೆ ಈಗ ಅರ್ಥವಾಗುತ್ತಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು.
ರಾಜ್ ಕುಮಾರ್ ಮಗನಾಗಿ ಹುಟ್ಟಿದ್ದು ಜನಗಳಿಗೆ ಪರಿಚಯ ಆಗಲು, ಸಿನಿಮಾಗೆ ಬಂದಿರುವುದು ಜನರಲ್ಲಿ ಪ್ರೀತಿ ಬೆಳೆಸಲು. ಅವನು ಬಂದಿರುವುದು ಗಂಧದ ಗುಡಿ ಸಿನಿಮಾ ಮಾಡುವುದಕ್ಕೆ, ನಮ್ಮ ಜನರಿಗೆ ಏನೋ ತಿಳಿಸಲಿಕ್ಕೆ ಬಂದವನೆ ಎಂದರು. ಜನರಿಗೆ ಸಂದೇಶ ಕೊಡುವುದಕ್ಕೆ ಅಪ್ಪು ಬಂದಿದ್ದ, ಅದಕ್ಕೆ ಅವನ ಕೊನೆ ದಿನಗಳಲ್ಲಿ ಈ ಸಿನಿಮಾ ಮಾಡಿದ್ದಾನೆ ಎಂದರು. ಬೆಟ್ಟದ ಹೂವಿನಿಂದ ಹಿಡಿದು, ಗಂಧದ ಗುಡಿಯವರೆಗೂ ಬಂದಿದ್ದಾನೆ ಅವನ ಕೆಲಸವನ್ನು ಅವನು ಮಾಡಿದ್ದಾನೆ, ನನ್ನ ಕೆಲಸ ಬಾಕಿಯಿದೆ ನಾನು ಇದನ್ನು ಎಲ್ಲರಿಗೂ ತಲುಪಿಸಬೇಕು ಎಂದರು.
ವಿಜಯ್ ದೇವರಕೊಂಡ ಮದುವೆಯಾಗಿದ್ದಾರಾ? ಜಾನ್ವಿ ಕಪೂರ್ ಅವರ ಹೇಳಿಕೆ ಹಿಂದಿನ ರಹಸ್ಯವೇನು?