ನಿಮಿಷಾಂಬ ದೇಗುಲಕ್ಕೂ 'ಅಪ್ಪು' ಗೂ ಇದೆ ನಂಟು: ದೇವಿಯ ದರ್ಶನ ಪಡೆದ ಅಶ್ವಿನಿ

ನಿಮಿಷಾಂಬ ದೇಗುಲಕ್ಕೂ ನಟ ಪುನೀತ್ ಫ್ಯಾಮಿಲಿಗೂ ನಂಟು ಇದ್ದು, ಗಂಧದ ಗುಡಿ ಸಿನಿಮಾದ ನಿರ್ಧಾರದ ದಿನ ಅಪ್ಪು ನಿಮಿಷಾಂಬ ದೇವಿಯ ದರ್ಶನ ಪಡೆದಿದ್ದರು.
 

Share this Video
  • FB
  • Linkdin
  • Whatsapp

ಇದೀಗ ಸಿನಿಮಾ ಬಿಡುಗಡೆ ದಿನ ಅಪ್ಪು ಪತ್ನಿ ಅಶ್ವಿನಿ, ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಮ್’ನಲ್ಲಿರುವ ನಿಮಿಷಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಇನ್ನು ಹಲವು ವರ್ಷಗಳಿಂದ ಅಪ್ಪು ಈ ದೇಗುಲಕ್ಕೆ ಬರುತ್ತಿದ್ದರು, ರಾಜ್‌ ಅಪಹರಣದ ವೇಳೆ ತಾಯಿಯ ಜೊತೆ ಬಂದು ಹರಕೆ ತೀರಿಸಿದರು ಎಂದು ಪ್ರಧಾನ ಅರ್ಚಕ ಸೂರ್ಯ ನಾರಾಯಣ್ ಭಟ್‌ ತಿಳಿಸಿದ್ದಾರೆ. ಪಾರ್ವತಮ್ಮ ತಮ್ಮ ತಾಳಿ ಹುಂಡಿಗೆ ಹಾಕಿ ಪ್ರಾರ್ಥಿಸಿದ್ದರು, ಇಂದು ಪುನೀತ್‌ ಇಲ್ಲ ಅನ್ನುವುದು ಬೇಸರ ಮೂಡಿಸಿದೆ ಎಂದರು.

ಐಶ್ವರ್ಯಾ ರೈ ಸಿನಿಮಾಕ್ಕೂ ಬಾರೀ ಹೊಡೆತ ನೀಡಿದ ಕಾಂತಾರ

Related Video