Asianet Suvarna News Asianet Suvarna News

ಪ್ರಜ್ವಲ್‌ ನಟನೆಯ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ಲಾಂಚ್ : ವಿಭಿನ್ನ ಗೆಟಪ್‌ನಲ್ಲಿ ನಟ !

ಐದು ಭಾಷೆಯಲ್ಲಿ ಸಿದ್ಧವಾಗ್ತಿದೆ ಚಿತ್ರ'ಜಾತರೆ
ಉದಯ ನಂದನವನಂ ನಿರ್ದೇಶನದ ಸಿನಿಮಾ
ಜಾತರೆ ಚಿತ್ರದಲ್ಲಿ ನಟ ಪ್ರಜ್ವಲ್‌ ದೇವರಾಜ್‌

First Published Jun 23, 2023, 3:47 PM IST | Last Updated Jun 23, 2023, 3:49 PM IST

ಪ್ರಿನ್ಸ್  ಪ್ರಜ್ವಲ್ ದೇವರಾಜ್ ಅವರು ಈಗಾಗಲೇ ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗವರು ಇದೇ ಮೊದಲ ಬಾರಿಗೆ  ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ  ಪ್ಯಾನ್ ಇಂಡಿಯಾ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ  ನಿರ್ಮಾಣವಾಗುತ್ತಿರುವ ಆ ಚಿತ್ರದ ಹೆಸರು "ಜಾತರೆ". ಲವ್, ಫ್ಯಾಮಿಲಿ ಸೆಂಟಿಮೆಂಟ್ ಕಥಾಹಂದರ ಇರುವ ಈ ಚಿತ್ರದಲ್ಲಿ ಪ್ರಜ್ವಲ್ ಈವರೆಗೆ ನಿರ್ವಹಿಸಿರದ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಉದಯ ನಂದನವನಂ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಗ್ಲಾಮರಸ್ ಯೋಗ ಭಂಗಿಯಲ್ಲಿ ಸ್ವೀಟಿ ರಾಧಿಕಾ: ಯೋಗದ ಕಿಚ್ಚು ಹೆಚ್ಚಿಸಿದ್ರು ಮಿಲ್ಕಿ ಬ್ಯೂಟಿ ಪ್ರಣಿತಾ!

Video Top Stories