Asianet Suvarna News Asianet Suvarna News

ಹುಟ್ಟುಹಬ್ಬದ ದಿನವೇ ಸ್ಟೇಷನ್ ಮೆಟ್ಟಿಲೇರ್ತಾರಾ ದುನಿಯಾ ವಿಜಿ?

Jan 20, 2020, 10:24 AM IST

ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ ದುನಿಯಾ ವಿಜಯ್. ಬರ್ತಡೇ ಸಂಭ್ರಮದಲ್ಲಿ ತಲ್ವಾರ್‌ನಿಂದ ಕೇಕ್ ಕಟ್ ಮಾಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. 

ಮತ್ತೆ ಶುರುವಾಗಿದೆ ಸುದೀಪ್- ದರ್ಶನ್ ವಾರ್; ಗೆಲ್ಲೋರ್ಯಾರು?

ಹೊಸಕೆರೆಹಳ್ಲಿ ತಮ್ಮ ನಿವಾಸದಲ್ಲಿ 46 ನೇ ಹುಟ್ಟುಹಬ್ಬವನ್ನು ಪತ್ನಿ ಕೀರ್ತಿ, ಅಪ್ಪ, ಅಮ್ಮನ ಜೊತೆ ಆಚರಿಸಿದ್ದಾರೆ. ಸಾಮಾನ್ಯವಾಗಿ 5 ಇಂಚಿಗೂ ಹೆಚ್ಚು ಉದ್ದದ ಕತ್ತಿಯನ್ನು ಒಟ್ಟುಕೊಳ್ಳುವಂತಿಲ್ಲ. ಇದಕ್ಕೆ ಲೈಸೆನ್ಸ್ ಪಡೆಯಬೇಕು. ಒಂದು ವೇಳೆ ಕೇಕ್ ಕಟಿಂಗ್‌ಗೆ ಬಳಸಿದ ತಲ್ವಾರ್  5 ಇಂಚಿಗೂ ಹೆಚ್ಚು ಉದ್ದವಾಗಿದ್ದರೆ ಕೇಕ್ ದಾಖಲಾಗುವುದು ಪಕ್ಕಾ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!