Asianet Suvarna News Asianet Suvarna News

'ಕೆಡಿ'ಯಲ್ಲಿ ಹೊಸ ಅವತಾರದಲ್ಲಿ ಧ್ರುವ ಸರ್ಜಾ: 35 ಕೆ.ಜಿ ತೂಕ ಕಡಿಮೆ ಮಾಡಿಕೊಂಡ ಆಕ್ಷನ್ ಪ್ರಿನ್ಸ್

'ಕೆಡಿ' ಸಿನಿಮಾಗಾಗಿ ಧ್ರುವ ಸರ್ಜಾ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ವರ್ಕೌಟ್ ಮಾಡಿ ಸ್ಲಿಮ್ ಆಗಿದ್ದಾರೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್ ನಂತ್ರ ಕಾಣಿಸ್ತಿರೋ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಕೆಡಿ. ಈ ಚಿತ್ರದಲ್ಲಿ ಧ್ರುವ ಹಿಂದೆದೂ ಕಾಣದ ಲುಕ್'ನಲ್ಲಿ ಕಾಣಿಸುತ್ತಿದ್ದಾರೆ. ಅದರಲ್ಲು ಪ್ರೇಮ್ ನಿರ್ದೇಶನ ಮಾಡುತ್ತಿರೋದ್ರಿಂದ ಹೀರೋ ಕ್ಯಾರೆಕ್ಟರ್ ಅನ್ನು ವಿಶೇಷವಾಗಿ ಡಿಸೈನ್ ಮಾಡಿರ್ತಾರೆ ಪ್ರೇಮ್. ಅದಕ್ಕೆ ಬೇಕಾದ ತಯಾರಿಯನ್ನ ಧ್ರುವ ಮಾಡಿದ್ದಾರೆ. ಅದು ಯಾವ್ ಮಟ್ಟಕ್ಕೆ ಅಂದ್ರೆ ತಮ್ಮ ದೇಹದ ತೂಕದಲ್ಲಿ ಬರೋಬ್ಬರಿ 35 ಕೆಜಿ ಕಡಿಮೆ ಮಾಡಿಕೊಂಡಿದ್ದಾರಂತೆ ಅದ್ದೂರಿ ಹುಡುಗ ಧ್ರುವ.