ಪುಂಡರ ಸಹವಾಸ ಕಟ್​, ಅಮ್ಮಾವ್ರ ಗಂಡ ದರ್ಶನ್! ಹೆಂಡತಿ ಬೆಂಗಾವಲಿನಲ್ಲಿ ದಾಸನ ದಿನಚರಿ ಹೇಗಿದೆ?

ನಟ ದರ್ಶನ್​ ಖದರ್​ ಕರಗಿ ಬದಲಾಗಿದ್ದಾರೆ. ದರ್ಶನ್ ಈಗ ಶೂಟಿಂಗ್ ಮತ್ತು ಮನೆ, ಹೆಂಡ್ತಿ, ಮಗನ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ದರ್ಶನ್​ ಅವರನ್ನು ಸುತ್ತುವರೆದಿದ್ದ ಕೆಟ್ಟ ಪರಿವಾರವನ್ನು ದೂರವಿಟ್ಟು, ಪತ್ನಿ ವಿಜಯಲಕ್ಷ್ಮೀ ಅವರ ಇಮೇಜ್​ ಸುಧಾರಿಸಲು ಶ್ರಮಿಸುತ್ತಿದ್ದಾರೆ.

Share this Video
  • FB
  • Linkdin
  • Whatsapp

ನಟ ದರ್ಶನ್​ ಖದರ್​ ಕರಗಿ ತಿಂಗಳುಗಳೇ ಕಳೆದಿವೆ. ಒಂದೇ ಒಂದು ದೊಡ್ಡ ದುರಂತ ದಾಸನ ಗತ್ತು ದೌಲತ್ತನ್ನೆಲ್ಲಾ ರಕ್ತದಲ್ಲಿ ಕೊಚ್ಚಿ ಹೋಗೋ ಹಾಗೆ ಮಾಡಿದೆ. ದರ್ಶನ್ ಈಗೇನಿದ್ರು ಅಮ್ಮಾವ್ರ ಗಂಡ. ದಾಸನಿಗೆ ಹೆಂಡತಿಯೇ ಬೆಂಗಾವಲು. ಕುಂತ್ರು ನಿಂತ್ರೂ ದರ್ಶನ್​​ ತನ್ನ ಮುದ್ದು ರಾಕ್ಷಸಿಯ ಮಾತು ಬಿಟ್ರೆ ಬೇರಾರ ಮಾತನ್ನೂ ಕೇಳಿಸಿಕೊಳ್ಳೋಲ್ಲ. ಹಾಗಾದ್ರೆ ಅಮ್ಮಾವ್ರ ಪತಿ ದಾಸನ ದಿನಚರಿ ಹೇಗಿದೆ? ದಚ್ಚು ಕರಿಯರ್ ಬಿಲ್ಡ್ ಮಾಡಲು ವಿಜಯಲಕ್ಷ್ಮೀ ಏನೆಲ್ಲಾ ಮಾಡುತ್ತಾರೆ ಅಂತ ನೋಡೋಣ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟ ದರ್ಶನ್​​ ಸಂಪೂರ್ಣ ಬದಲಾಗಿದ್ದಾರೆ. ದರ್ಶನ್ ಕೆಲಸ ಏನಿದ್ರು ಶೂಟಿಂಗ್ ಮತ್ತು ಮನೆ ಹೆಂಡ್ತಿ ಮಗ ಇಷ್ಟೇ ಪ್ರಪಂಚ. ದರ್ಶನ್​ ಹಿಂದೆ ಇದ್ದ ಪುಂಡ ಪೋಕ್ರಿಗಳ ದೊಡ್ಡ ಬಾಲ ಕಟ್​ ಆಗಿದೆ. ದರ್ಶನ್ ಈಗ ಹೆಂಡ್ತಿ ಮಗನ ಜೊತೆಯಷ್ಟೇ ಓಡಾಡ್ತಾರೆ. ದೊಡ್ಡ ಸ್ಟಾರ್​ ಡಮ್​ ಇದ್ರೂ ನಟ ದರ್ಶನ್​ ಹಾಳಾಗಿದ್ದು ಅವರ ಸುತ್ತ ಇದ್ದ ಕೆಟ್ಟ ಪಟಾಲಂನಿಂದ ಅಂತ ಇಡೀ ಚಿತ್ರರಂಗ ಒಕ್ಕೊರಲಿನಿಂದ ಹೇಳಿತ್ತು. ಅದು ನಿಜವೂ ಆಯ್ತು. ದರ್ಶನ್ ಸುತ್ತ ಇದ್ದವರೆಲ್ಲಾ ಕಿರಾತಕರೆ. ಆದ್ರೆ ಈಗ ಆ ಕಿರಾತಕ ಗ್ಯಾಂಗ್​ ಅನ್ನ ದಚ್ಚು ದೂರ ಇಟ್ಟಿದ್ದಾರೆ. ಡ್ಯಾಮೇಜ್ ಆಗಿರೋ ದಾಸನ ಇಮೇಜ್​ ಅನ್ನ ಮತ್ತೆ ಕಟ್ಟಿಕೊಡೋಕೆ ಪತ್ನಿ ವಿಜಯಲಕ್ಷ್ಮೀ ಪಣ ತೊಟ್ಟಿದ್ದಾರೆ. 

ನಟ ದರ್ಶನ್​​​ ಸಂಪೂರ್ಣ ಜವಾಬ್ಧಾರಿ ವಿಜಯಲಕ್ಷ್ಮೀಯದ್ದು. ದಚ್ಚು ಬೆಳಗ್ಗೆ ಎದ್ದು ರಾತ್ರಿ ಮಲಗೋ ವರೆಗೂ ಏನ್ ಮಾಡಬೇಕು. ಏನು ಮಾಡಬಾರದು ಅಂತ ನಿರ್ಧರಿಸೋದು ವಿಜಯಲಕ್ಷ್ಮೀ. ಹೀಗಾಗಿ ದಾಸ ಶೂಟಿಂಗ್ ಬಿಟ್ರೆ ಸೀದಾ ಮನೆ ಸೇರಿಕೊಳ್ತಾರೆ. ದಚ್ಚುಗೆ ಬೇಕಾದ ಊಟ ಜಿಮ್​​​ ಬಟ್ಟೆ ಹೀಗೆ ಪ್ರತಿಯೊಂದನ್ನ ನೋಡಿಕೊಳ್ಳೋದು ಪತ್ನಿಯೇ ಅಂತೆ. ದರ್ಶನ್ ಕೂಡ ನನಗೆ ಯಾರ್ ಸಹವಾಸವೂ ಬೇಡ ಅಂತ ಹೆಂಡತಿ ಜೊತೆಯೇ ಎಲ್ಲಾ ಕಡೆ ಓಡಾಡುತ್ತಿದ್ದಾರೆ.

Related Video