ದರ್ಶನ್ ಸರ್ಜರಿ ವಿಳಂಬ ಮಾಡಿದ್ದರ ಹಿಂದೆ ಏನಾದ್ರೂ ಮಾಸ್ಟರ್​ಪ್ಲ್ಯಾನ್ ಇದ್ಯಾ?

ಸಾಮಾನ್ಯ ಬೇಲ್ ಅರ್ಜಿಯ ವಿಚಾರಣೆ ಕೂಡ ಕಂಪ್ಲೀಟ್ ಆಗಿದ್ದು, ಇದರ ತೀರ್ಪನ್ನ ಕಾದಿರಿಸಲಾಗಿದೆ. ಆ ಜಡ್ಜ್​ಮೆಂಟ್ ಬರುವವರೆಗೂ ದರ್ಶನ್ ಮಂಧ್ಯಂತರ ಬೇಲ್​ಗೆ ಮುಂದುವರಿಕೆಗೆ ಅವಕಾಶ ನೀಡಲಾಗಿದೆ. ಹಾಗಿದ್ರೆ ಮುಂದೇನು? ಕಂಪ್ಲೀಟ್ ಸ್ಟೋರಿ ವಿಡಿಯೋದಲ್ಲಿದೆ ನೋಡಿ.. 

First Published Dec 12, 2024, 1:04 PM IST | Last Updated Dec 12, 2024, 1:04 PM IST

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಎ-2 ಆಗಿರೋ ದರ್ಶನ್ (Actor Darshan) ಸದ್ಯ ಮೆಡಿಕಲ್ ಬೇಲ್ ಮೇಲೆ ಆಸ್ಪತ್ರೆಯಲ್ಲಿರೋ ವಿಷ್ಯ ನಿಮಗೆ ಗೊತ್ತೇ ಇದೆ. ಅಸಲಿಗೆ ನಿನ್ನೆ ದರ್ಶನ್ ಬೇಲ್ ಅವಧಿ ಮುಗಿದಿದ್ದು ಇವತ್ತು ಜೈಲ್​ಗೆ ಮರಳಬೇಕಿತ್ತು. ಆದ್ರೆ ದರ್ಶನ್ ಪರ ವಕೀಲರು ನಿನ್ನೆ ಸರ್ಜರಿ ನಡೆಯಲಿದೆ ಅನ್ನೋ ಮಾಹಿತಿ ಕೊಟ್ಟಿದ್ದಾರೆ. ಹಾಗಾದ್ರೆ ಇವತ್ತು ಸರ್ಜರಿ ನಡೀತಾ..? ದರ್ಶನ್ ಸದ್ಯದ ಸ್ಥಿತಿ ಹೇಗಿದೆ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಹೌದು, ನಟ ದರ್ಶನ್​ ಜೈಲಿನಿಂದ ಮಧ್ಯಂತರ ಜಾಮೀನು ಪಡೆದುಕೊಂಡು ಬಂದು 6 ವಾರಗಳು ಕಂಪ್ಲೀಟ್ ಆಗಿವೆ. ನಟ ದರ್ಶನ್ ಆಚೆ ಬಂದು ಆರುವಾರಗಳು ಕಳೆದವು. ಹೈಕೋರ್ಟ್ ನೀಡಿದ್ದ ಬೇಲ್ ಅವಧಿ ಮುಕ್ತಾಯವಾಗಿದೆ. ಆದ್ರೆ, ಹೈಕೋರ್ಟ್​​ನಲ್ಲಿ  ದರ್ಶನ್​ಗೆ ಇನ್ನೂ ಸರ್ಜರಿ ಆಗದೇ ಇರೋದ್ರಿಂದ ಮೆಡಿಕಲ್ ಬೇಲ್ ಮುಂದುವರೆಕೆ ಮಾಡಿ ಅಂತ ಮನವಿ ಮಾಡಲಾಗಿತ್ತು. 