ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲವೇ ಅಲ್ಲ; ಸುದ್ದಿಗೋಷ್ಠಿಯಲ್ಲಿ ನಟ ಚೇತನ್ ಹೇಳಿಕೆ
ನಟ ಚೇತನ್ ಕುಮಾರ್ ಅವರ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದಿದ್ದ ಚೇತನ್ ಇದೀಗ ಸುದ್ದಿಗೋಷ್ಠಿ ನಡೆಸಿ ಸುದೀರ್ಘ ವಿವರಣೆ ನೀಡಿದ್ದಾರೆ.
ಭೂತಕೋಲ ಮೂಲ ನಿವಾಸಿ ಸಂಸ್ಕೃತಿ. ಇದು ಹಿಂದೂ ಧರ್ಮದ ಒಳಗೆ ಎನ್ನುವುದು ತಪ್ಪು. ಪಂಬದ, ಕೊರಗ ಸೇರಿದಂತೆ ಅನೇಕ ಮೂಲ ನಿವಾಸಿಗಳಿಗೆ ಅವರದೇ ಆದ ಪ್ರತ್ಯೇಕ ಸಂಪ್ರದಾಯವಿದೆ. ಆದರೆ ಹಿಂದೂ ಧರ್ಮ ಬುಡಕಟ್ಟು ಸಂಸ್ಕೃತಿಯನ್ನು ಸೇರಿಸಿಕೊಂಡು ನಮ್ಮದು ಎನ್ನುತ್ತಿದೆ. ಭೂತಕೋಲ, ಪ್ರಕೃತಿ, ಪರಿಸರ ಆರಾಧನೆಯನ್ನು ಆದಿ ನಿವಾಸಿಗಳು ಆಚರಣೆ ಮಾಡಿಕೊಂಡಿದ್ದರು. ಆದರೆ ವೈದಿಕ ಪರಂಪರೆ ಬಂದಮೇಲೆ ಇದೂ ಕೂಡ ನಮ್ಮದೆ ಎಂದು ಸೇರಿಸಿಕೊಂಡಿದ್ದಾರೆ. ವೈದಿಕತೆ ಮತ್ತು ಮೂಲನಿವಾಸಿಗೂ ವ್ಯತ್ಯಾತವಿದೆ ಎಂದು ಚೇತನ್ ಹೇಳಿದ್ದಾರೆ.