ತುಮಕೂರು ರೀಲ್ಸ್ ರಾಣಿಯ ದುರಂತ ಅಂತ್ಯಕ್ಕೆ ಕಾರಣವಾದನೇ ಸ್ಟ್ರೀಟ್ ಫೋಟೋ ಗ್ರಾಫರ್!

ತುಮಕೂರಿನಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಆರಂಭವಾದ ಪ್ರೇಮಿಗಳ ಜಗಳ ಯುವತಿಯ ಆತ್ಮಹತ್ಯೆಯಲ್ಲಿ ಅಂತ್ಯಗೊಂಡಿದೆ. ಚೈತನ್ಯ ಎಂಬ ಪದವಿ ವಿದ್ಯಾರ್ಥಿನಿ, ಪ್ರೇಮಿ ವಿಜಯ್‌ನೊಂದಿಗಿನ ಜಗಳದ ಬಳಿಕ ಸಾವಿಗೆ ಶರಣಾಗಿದ್ದಾಳೆ.

Share this Video
  • FB
  • Linkdin
  • Whatsapp

ತುಮಕೂರು (ಜೂ. 24): ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ರೀಲ್ಸ್ ಒಂದರಿಂದ ಪ್ರೇಮಿಗಳ ನಡುವೆ ನಡೆದ ಜಗಳ, ಕೊನೆಗೆ ಯುವತಿಯ ದುರಂತ ಮರಣದಲ್ಲಿ ಅಂತ್ಯಗೊಂಡಿದೆ. ಆದರೆ, ಈ ಇಬ್ಬರ ಜಗಳ ಹಾಗೂ ಸಾವಿಗೆ ಸ್ಟ್ರೀಟ್ ಫೋಟೋಗ್ರಾಫರ್ ಕಾರಣವಾದನೇ ಎಂಬ ಅನುಮಾನ ದಟ್ಟವಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೃತಳನ್ನು ಚೈತನ್ಯ (22) ಎಂದು ಗುರುತಿಸಲಾಗಿದೆ. ಈಕೆ ತುಮಕೂರು ಗ್ರಾಮಾಂತರದ ಹೊಸಹಳ್ಳಿಯ ನಿವಾಸಿಯಾಗಿದ್ದು, ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಜೊತೆಗೆ ಫ್ರೀಲಾನ್ಸ್ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಳು. ಚೈತನ್ಯ ಕಳೆದ ಕೆಲ ವರ್ಷಗಳಿಂದ ಪಕ್ಕದ ಊರಿನ ವಿಜಯ್ ಕುಮಾರ್ ಎಂಬ ಕಾರು ಚಾಲಕನೊಂದಿಗೆ ಪ್ರೀತಿಯಲ್ಲಿ ಇದ್ದಳು. ಈ ಸಂಬಂಧ ಮನೆಮಂದಿಗೆ ಗೊತ್ತಾಗದಂತೆ ಮುಂದುವರೆದಿತ್ತು. ಆದರೆ ವಿಷಯ ತಿಳಿದ ಚೈತನ್ಯಳ ಮಾವ ಆಕೆಗೆ ಎಚ್ಚರಿಕೆ ನೀಡಿ, ಪ್ರೇಮ ಸಂಬಂಧ ಕೊನೆಗೊಳಿಸಬೇಕೆಂದು ಸಲಹೆ ನೀಡಿದ್ದರು.

ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ ಮೇಡಂ ನೀವು ಚೆನ್ನಾಗಿ ಕಾಣಿಸ್ತೀರಿ, ನಿಮ್ಮ ಫೋಟೋ ತೆಗೆಯಬಹುದೇ ಎಂದು ಕೇಳಿ ಬರೋಬ್ಬರಿ 25 ಫೋಟೋಗಳನ್ನು ತನ್ನ ಕ್ಯಾಮೆರಾದಲ್ಲಿ ತೆಗೆದಿದ್ದಾನೆ. ಈ ಫೋಟೋಗಳನ್ನು ಹಾಗೂ ವಿಡಿಯೋವನ್ನು ಚೈತನ್ಯ ಕೂಡ ಇನ್‌ಸ್ಟಾಗ್ರಾಮ್‌ಗೆ ಹಾಕಿಕೊಂಡಿದ್ದಾಳೆ. ಆದರೆ, ಇದನ್ನು ನೋಡಿ ಸಹಿಸದ ಪ್ರೇಮಿ ವಿಜಯ್ ಪ್ರಶ್ನಿಸಲು ಗೆಳತಿಯ ಮನೆಗೆ ಬಂದು ಜಗಳ ಆರಂಭಿಸಿದ್ದನು. ಈ ವೇಳೆ ಚೈತನ್ಯ ತಾಯಿ ಸೌಭಾಗ್ಯಮ್ಮ ಮನೆ ಒಳಗೇ ಇದ್ದರು. ಅವರು ಇದ್ದ ಕೋಣೆಯ ಬಾಗಿಲು ಲಾಕ್ ಆಗಿದ್ದರಿಂದ ಚೈತನ್ಯ ಹಾಗೂ ವಿಜಯ್ ಮನೆಯ ಕಿಟಕಿಯ ಬಳಿ ಜಗಳ ಮಾಡಿಕೊಂಡಿದ್ದರು. ವಿಜಯ್ ಮನೆಗೆ ಬಂದು ಹೋದ ವಿಚಾರವೂ ಸೌಭಾಗ್ಯಳ ತಾಯಿಗೆ ಗೊತ್ತಿರಲಿಲ್ಲ.

ತುಮಕೂರು ಸುಂದರಿಗೆ ಕಂಟಕವಾದ ರೀಲ್ಸ್; ಪ್ರೇಮಿಯ ಒಂದು ಮಾತಿಗೆ ಪ್ರಾಣವನ್ನೇ ಬಿಟ್ಟಳು!

ತುಮಕೂರು ಸುಂದರಿಗೆ ಕಂಟಕವಾದ ರೀಲ್ಸ್; ಪ್ರೇಮಿಯ ಒಂದು ಮಾತಿಗೆ ಪ್ರಾಣವನ್ನೇ ಬಿಟ್ಟಳು!

ನಾನು ಸಾಯ್ತೀನಿ ಎಂಬ ಅಂತಿಮ ಕರೆ
ಜಗಳ ನಂತರ ವಿಜಯ್ ಸ್ಥಳದಿಂದ ಹೊರಟಿದ್ದನು. ಕೆಲವೇ ಕ್ಷಣಗಳಲ್ಲಿ ಚೈತನ್ಯ ವಿಜಯ್‌ಗೆ ಕರೆ ಮಾಡಿ 'ನಾನು ಸಾಯ್ತೀನಿ' ಎಂದು ತಿಳಿಸಿದ್ದಾಳೆ. ತಕ್ಷಣ ವಿಜಯ್ ಈ ವಿಷಯವನ್ನು ಆಕೆಯ ಸಂಬಂಧಿಕರಿಗೆ ತಿಳಿಸಿದ್ದಾರೆ. ಸಂಬಂಧಿಕರು ಧಾವಿಸಿದಾಗ, ಚೈತನ್ಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಳು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮೃತಪಟ್ಟಿದ್ದಾಳೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು, ಚೈತನ್ಯ ಸಾಯಲು ವಿಜಯ್ ಕುಮಾರ್ ನೇರ ಕಾರಣ ಎಂದು ಆರೋಪಿಸಿದ್ದಾರೆ. ಪೊಲೀಸರು ವಿಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Related Video