Assembly election:ಮುಸ್ಲಿಮರ ಮತಬೇಟೆಗೆ ಸಿದ್ದುಗೆ ಸಾಥ್ ಕೊಡ್ತಿಲ್ವಾ ಜಮೀರ್ ಅಹಮದ್ ಖಾನ್?
ಮುಸ್ಲಿಂ ಮತಗಳನ್ನು ಓಲೈಕೆ ಮಾಡಿ ಸಿದ್ದರಾಮಯ್ಯ ಅವರಿಗೆ ಕೊಡಿಸುವಂತಹ ಅರ್ಹತೆ ಇರುವ ಶಾಸಕ ಜಮೀರ್ ಅಹಮದ್ ಖಾನ್ ಈವರೆಗೆ ಕೋಲಾರಕ್ಕೆ ಹೋಗಿ ಮುಸ್ಲಿಂ ಮತಗಳನ್ನು ಓಲೈಕೆ ಮಾಡಲು ಮುಂದಾಗಿಲ್ಲ.
ಕೋಲಾರ (ಫೆ.16): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದು, ಅಲ್ಲಿನ ಮುಸ್ಲಿಂ ಮತಗಳು ಸುಖಾಸುಮ್ಮನೆ ಕಾಂಗ್ರೆಸ್‌ಗೆ ಬರುವುದಿಲ್ಲ. ಅಲ್ಲಿ ಠಿಕಾಣಿ ಹೂಡಿ, ಅಲ್ಲಿನ ಎಲ್ಲ ಮುಸ್ಲಿಂ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರಷ್ಟೇ ಕಾಂಗ್ರೆಸ್‌ಗೆ ಬರಲಿವೆ.
ಆದರೆ, ಈ ಹಿಂದೆ ಮುಸ್ಲಿಂ ಮತಗಳು ಕಾಂಗ್ರೆಸ್ ಪಾಕೆಟ್‌ನಲ್ಲಿ ಇರುತ್ತಿದ್ದವು. ಈಗ ಅಂತಹ ಸ್ಥಿತಿ ಕೋಲಾರದಲ್ಲಿ ಇಲ್ಲ. ಆದರೆ, ಮುಸ್ಲಿಂ ಮತಗಳನ್ನು ಓಲೈಕೆ ಮಾಡಿ ಸಿದ್ದರಾಮಯ್ಯ ಅವರಿಗೆ ಕೊಡಿಸುವಂತಹ ಅರ್ಹತೆ ಇರುವ ಶಾಸಕ ಜಮೀರ್ ಅಹಮದ್ ಖಾನ್ ಈವರೆಗೆ ಕೋಲಾರಕ್ಕೆ ಹೋಗಿ ಮುಸ್ಲಿಂ ಮತಗಳನ್ನು ಓಲೈಕೆ ಮಾಡಲು ಮುಂದಾಗಿಲ್ಲ. ರಾಜ್ಯದ ೩೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಸ್ಲಿಂ ಮತಗಳ ಮೇಲೆ ಹಿಡಿತ ಹೊಂದಿರುವಂತಹ ಶಾಸಕ ಜಮೀರ್ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡುತ್ತಿಲ್ಲ. ಆದರೆ, ಮುಸ್ಲಿಂ ಮತಗಳನ್ನು ಪಡೆಯುವ ರೇಸ್‌ನಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್ ತೀವ್ರ ಮುಂದೆ ಇದೆ. ಜೆಡಿಎಸ್ ಅಭ್ಯರ್ಥಿಯ ಪರವಾಗಿ ಮುಸ್ಲಿಂ ಮತಗಳನ್ನು ಕೊಡಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಈಗಾಗಲೇ ಮೂರು ಸಭೆಗಳನ್ನು ಮಾಡಿದ್ದಾರೆ.