
Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
ಎಐ ಜಾಗತಿಕ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಗದ್ದಲ ಸೃಷ್ಟಿಸಿದರು. ಈ ಘಟನೆಯನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದರೆ, ಕಾಂಗ್ರೆಸ್‌ನಲ್ಲೇ ಮಾರ್ಗರೇಟ್ ಆಳ್ವಾ ಬೇಸರ ವ್ಯಕ್ತಪಡಿಸಿದ್ದು, ಬಿ.ಕೆ ಹರಿಪ್ರಸಾದ್ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗಸಭೆ. ಜನಸಾಮಾನ್ಯರಂತೆ ಈ ಗುಂಪು, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರು. ಈ ಮೂಲಕ ಕಾರ್ಯರ್ತರು ಭಾರತ್ ಮಂಟಪದೊಳಗೆ ಪ್ರವೇಶಿಸಿದ್ದರು. ‘ಅವರು ಸ್ವೆಟರ್ ಮತ್ತು ಜಾಕೆಟ್ ಹಾಕಿಕೊಂಡಿದ್ದರಿಂದ ಸೆಕ್ಯುರಿಟಿಗಳಿಗೆ ಶರ್ಟ್ ಮೇಲಿದ್ದ ಮೋದಿ-ಟ್ರಂಪ್ ಫೋಟೋ, ಘೋಷಣೆ ಕಾಣಿಸಿರಲಿಲ್ಲ