
ಪೊಲೀಸರಿಂದ ತಪ್ಪಿಸಿ ಎಸ್ಕೇಪ್ ಆದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ! ವಿಡಿಯೋ ವೈರಲ್
ಪೊಲೀಸರಿಂದ ತಪ್ಪಿಸಿ ಎಸ್ಕೇಪ್ ಆದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ವಿಡಿಯೋ ವೈರಲ್ ಆಗಿದೆ. ಘಟನೆಗೆ ಮುಂಚೆ ಅವರು ನೀಡಿದ್ದ ಹೇಳಿಕೆ ನೋಡಿ...
ಬೆಂಗಳೂರು (ಜೂನ್ 13): ದೆಹಲಿಯ ಜಾರಿ ನಿರ್ದೇಶನಾಲಯದ (Enforcement Directorate) ಕಚೇರಿಯ ಹೊರಗೆ ಕಾಂಗ್ರೆಸ್ ಬೆಂಬಲಿಗರು ನಡೆಸಿದ ಗಲಾಟೆಯ ನಡುವೆ, ಕಾಂಗ್ರೆಸ್ ರಾಜಕಾರಣಿ (Congress politician) ಮತ್ತು ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ (national president of the Youth Congress) ಅಕ್ಷರಶಃ ಪೊಲೀಸ್ ಬಂಧನದಿಂದ ತಪ್ಪಿಸಿಕೊಳ್ಳಲು ಓಡಿಹೋದರು.
ಬಿವಿ ಶ್ರೀನಿವಾಸ್ ತಮ್ಮ ಎಸ್‌ಯುವಿಯಲ್ಲಿ ಇಡಿ ಕಚೇರಿಗೆ ಬಂದ ನಂತರ ಅವರನ್ನು ಬಂಧಿಸಲು ಒಬ್ಬ ಪೊಲೀಸ್ (Police) ತೆರಳುತ್ತಿದ್ದಂತೆ, ಕಾಂಗ್ರೆಸ್ ನಾಯಕ ಬಂಧನಕ್ಕೊಳಗಾಗುವುದನ್ನು ತಪ್ಪಿಸಲು ಓಡಿಹೋದರು. ಈ ಘಟನೆ ನಡೆಯುವ ಮುನ್ನ ಮಾತನಾಡಿದ್ದ ಬಿವಿ ಶ್ರೀನಿವಾಸ್, ನಾನು ಪೊಲೀಸರಿಗೆ ಹೆದರೋದಿಲ್ಲ, ಯಾವುದೇ ಕಾರಣಕ್ಕೂ ಹೆದರುವ ಪ್ರಶ್ನೆಯೂ ಇಲ್ಲ ಎಂದು ಹೇಳಿದ್ದರು.
ED ವಿಚಾರಣೆ ನಡುವೆ ಅಮ್ಮನ ಭೇಟಿಯಾದ ರಾಹುಲ್ ಗಾಂಧಿ
ಇದರ ಬೆನ್ನಲ್ಲಿಯೇ ಪೊಲೀಸರು ಬಿವಿ ಶ್ರೀನಿವಾಸ್ ಅವರನ್ನು ಬಂಧಿಸಲು ಕಾರಿನ ಬಳಿ ಬಂದಿದ್ದರು. ಆದರೆ, ಪೊಲೀಸ್ ಹೆಗಲ ಮೇಲೆ ಕೈ ಹಾಕುತ್ತಿದ್ದಂತೆ ತಪ್ಪಿಸಿಕೊಂಡು ಪರಾರಿಯಾದರು. ಇದನ್ನು ಬಿಜೆಪಿ ಲೇವಡಿ ಮಾಡಿದ್ದು, ಎಸ್ಕೇಪ್ ಆಗುವುದರಲ್ಲಿ ಕಾಂಗ್ರೆಸ್ ನಾಯಕರು ಎಕ್ಸ್ ಪರ್ಟ್ ಎಂದು ಹೇಳಿದೆ.