ನಿನ್ನ ಮಾತು ನಿನ್ನ ಸಂಸ್ಕಾರ ತೋರಿಸಿಕೊಟ್ಟಿದೆ: ಸಿದ್ದರಾಮಯ್ಯಗೆ ಶ್ರೀರಾಮುಲು ಟಾಂಗ್

ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಕೆ ಮಾಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರಿಗೆ ಸಚಿವ ಬಿ.ಶ್ರೀರಾಮುಲು, ನಿನ್ನ ಮಾತುಗಳು ನಿನ್ನ ಸಂಸ್ಕಾರವನ್ನು ತೋರಿಸಿಕೊಟ್ಟಿದೆ ಎಂದು ಸಿದ್ದರಾಮಯ್ಯ ಅವರಿಗೆ ಏಕವಚನದಲ್ಲಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

Share this Video
  • FB
  • Linkdin
  • Whatsapp

ಬಳ್ಳಾರಿ (ಜ.04): ಸಿದ್ದರಾಮಯ್ಯ ಅವರು ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಕೆ ಮಾಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರಿಗೆ ಸಚಿವ ಬಿ.ಶ್ರೀರಾಮುಲು, ನಿನ್ನ ಮಾತುಗಳು ನಿನ್ನ ಸಂಸ್ಕಾರವನ್ನು ತೋರಿಸಿಕೊಟ್ಟಿದೆ ಎಂದು ಸಿದ್ದರಾಮಯ್ಯ ಅವರಿಗೆ ಏಕವಚನದಲ್ಲಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೊಮ್ಮಾಯಿ ಸರ್ಕಾರ ಬಳ್ಳಾರಿಗೆ ನೀಡಿದ ಕೊಡುಗೆ ವಿವರಣೆ ನೀಡಿದ ರಾಮುಲು. ಬಳ್ಳಾರಿ ಜನರಿಗೆ ಹತ್ತು ಸಾವಿರ‌ ಜನರಿಗೆ ಪಟ್ಟಾ ನೀಡೋ ಕೆಲಸ ಮಾಡ್ತಿದ್ದೇವೆ. ಬಳ್ಳಾರಿ ವಿಮಾನ ನಿಲ್ದಾಣಕ್ಕೆ ನೂರು ಕೋಟಿ ಅನುದಾನ ನೀಡಿದ್ದಾರೆ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದಾಗ ಬಳ್ಳಾರಿಗೆ ಬಂದ ಅಭಿವೃದ್ಧಿ ಅನುದಾನ ಸಮತೋಲನ ಮಾಡಿ ನೋಡಿ. ಚುನಾವಣೆ ಬಂದಾಗ ಮಾತ್ರ ಕೆಲವರಿಗೆ ಸ್ಲಂ ಜನರು, ಬಡವರು, ಕೆಳ ವರ್ಗದ ಜನರು ನೆನಪಾಗ್ತಾರೆ. ಆದರೆ ನಮ್ಮ ಸರ್ಕಾರ ಹಾಗಲ್ಲ ನಿರಂತರವಾಗಿ ಜನರೊಂದಿಗೆ ಇರುತ್ತೇವೆ. ಮೀಸಲಾತಿ ಹೆಚ್ಚಳ ಮಾಡಿರೋದು ನಮ್ಮ ಸರ್ಕಾರ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

Assembly election: ಸಿದ್ದರಾಮಯ್ಯ ನಾಯಿಮರಿ ಹೇಳಿಕೆಗೆ ಜ್ಞಾನಿಯಂತೆ ಉತ್ತರಿಸಿದ ಸಿಎಂ ಬೊಮ್ಮಾಯಿ: ಸಿದ್ದುಗೆ ನಾಚಿಕೆ..!

Related Video