ಎಲ್ಲರನ್ನು ಓಲೈಸಿದ್ರೆನೇ ರಾಜಕಾರಣ ಮಾಡೋಕೆ ಆಗೋದು..! ಎಂಟಿಬಿ ಸಮರ್ಥನೆ

ಹೊಸಕೋಟೆಯಲ್ಲಿ ಮುಸ್ಲಿಂ ಮತಗಳನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ನಿನ್ನೆ ರಾತ್ರಿಯಿಡೀ ಖವ್ವಾಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಗಾಯಕನ ಮೇಲೆ ಸಾರ್ವಜನಿಕರು ನೋಟಿನ ಮಳೆ ಸುರಿಸಿದ್ದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

 

First Published Jan 17, 2023, 4:59 PM IST | Last Updated Jan 17, 2023, 4:59 PM IST

ಹೊಸಕೋಟೆ  (ಜ.17): ಹೊಸಕೋಟೆಯಲ್ಲಿ ಮುಸ್ಲಿಂ ಮತಗಳನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ನಿನ್ನೆ ರಾತ್ರಿಯಿಡೀ ಖವ್ವಾಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಮತ್ತು ಅವರ ಪುತ್ತ ಪುರುಷೋತ್ತಮ್‌ ಮುಸ್ಲಿಂ ಟೊಪ್ಪಿಗೆ ಹಾಕಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಖವ್ವಾಲಿ ಹಾಡುವ ಕಲಾವಿದನ ಮೇಲೆ ಅಲ್ಲಿದ್ದ ಸಾರ್ವಜನಿಕರು ನೋಟಿನ ಮಳೆಯನ್ನೇ ಸುರಿಸಿದ್ದರು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಬಗ್ಗೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್‌ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅಲ್ಲಿದ್ದ ಕೆಲವರು 10 ರೂ. ಹಾಗೂ 20 ರೂ. ನೋಟುಗಳನ್ನು ಖವ್ವಾಲಿ ಕಲಾವಿದನ ಮೇಲೆ ಹಾಕಿದ್ದಾರೆ. ಕಾರ್ಯಕ್ರಮ ಆಯೋಜಕರು ಈ ರೀತಿ ಹಣವನ್ನು ಹಾಕಿಲ್ಲ. ಯಾವುದೇ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.