ಸಿದ್ದು ರೀತಿ ಪ್ರಾಸಿಕ್ಯೂಷನ್ ಪಂಜರಕ್ಕೆ ಬೀಳ್ತಾರಾ ದಳಪತಿ? ದಳಪತಿಗೆ ಖೆಡ್ಡಾ ತೋಡಿದ್ರಾ ಸಿದ್ದರಾಮಯ್ಯ?

ಅಕ್ರಮ ಗಣಿಗಾರಿಕೆಗೆ ಅನುಮತಿ ಕೊಟ್ಟಿರೋ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ತನಿಖೆ ಮುಗಿದಿದ್ದು, ಪ್ರಾಸಿಕ್ಯೂಷನ್'ಗೆ ಪರ್ಮಿಷನ್ ಕೊಡಿ ಅಂತ ರಾಜ್ಯಪಾಲರಿಗೆ ಎಸ್ಐಟಿ ಮನವಿ ಸಲ್ಲಿಸಿದೆ. ಹಾಗಾದ್ರೆ ರಾಜ್ಯಪಾಲರು ಸಿದ್ದರಾಮಯ್ಯನವರಂತೆ ದಳಪತಿ ವಿರುದ್ಧವೂ ಪ್ರಾಸಿಕ್ಯೂಷನ್"ಗೆ ಗ್ರೀನ್ ಸಿಗ್ನಲ್ ಕೊಡ್ತಾರಾ..?   ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.

First Published Aug 23, 2024, 9:42 AM IST | Last Updated Aug 23, 2024, 9:42 AM IST

ರಾಜ್ಯ ರಾಜಕಾರಣದಲ್ಲಿ ಶುರುವಾಯ್ತಾ ಮುಯ್ಯಿಗೆ ಮುಯ್ಯಿ ರಾಜಕಾರಣ..? ಸಿದ್ದರಾಮಯ್ಯಗೆ ಮುಡಾ ಸಂಕಷ್ಟ.. ದಳಪತಿಗೆ ಅಕ್ರಮ ಗಣಿ ಕಂಟಕ..! ಅವರದ್ದು 20 ವರ್ಷಗಳ ಹಿಂದಿನ ಕೇಸ್, ಇವರದ್ದು 17 ವರ್ಷಗಳ ಹಿಂದಿನ ಪ್ರಕರಣ..! ಆ ಕೇಸ್ ಕೆದಕಿದ್ದಕ್ಕೇ ಹೊರ ಬಂತಾ ಈ ಕೇಸ್..? ಅರೆಸ್ಟ್ ಮಾಡಬೇಕಾದ ಸಂದರ್ಭ ಬಂದ್ರೆ ಕುಮಾರಸ್ವಾಮಿ ಬಂಧನ ಶತಸಿದ್ಧ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದೇಕೆ..? ತಾಕತ್ತಿದ್ದರೆ ನನ್ನನ್ನು ಮುಟ್ಟಿ ನೋಡಿ ಅಂತ ಅಬ್ಬರಿಸಿದ್ದೇಕೆ ದಳಪತಿ..? ಸಿದ್ದರಾಮಯ್ಯ ಮಾದರಿಯಲ್ಲೇ ಕುಮಾರಸ್ವಾಮಿಗೂ ಕಾದಿದ್ಯಾ ಪ್ರಾಸಿಕ್ಯೂಷನ್ ಪಂಜರ..? ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಮಾಯಾಜಾಲದಲ್ಲಿ ಸಿಲುಕಿಕೊಂಡಿದ್ರೆ, ಕೇಂದ್ರ ಸಚಿವ ಕುಮಾರಸ್ವಾಮಿಯವ್ರನ್ನು ಅಕ್ರಮ ಗಣಿ ಕಂಟಕದಲ್ಲಿ ಕೆಡವಲು ಕಾಂಗ್ರೆಸ್ ಮುಂದಾಗಿದೆ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್'ಗೆ ಪರ್ಮಿಷನ್ ಕೊಡಿ ಅಂತ ರಾಜ್ಯಪಾಲರಿಗೆ ಲೋಕಾಯುಕ್ತ ಎಸ್ಐಟಿ ಮನವಿ ಸಲ್ಲಿಸಿದೆ. ಹಾಗಾದ್ರೆ ಸಿದ್ದರಾಮಯ್ಯನವರಂತೆ ಎಚ್ಡಿಕೆ ವಿರುದ್ಧವೂ ರಾಜ್ಯಪಾಲರು ಪ್ರಾಸಿಕ್ಯೂಷನ್"ಗೆ ಗ್ರೀನ್ ಸಿಗ್ನಲ್ ಕೊಡ್ತಾರಾ..? ದಳಪತಿ ವಿರುದ್ಧದ ಪ್ರಕರಣದಲ್ಲಿ ರಾಜ್ಯಪಾಲರ ಮುಂದಿರೋ ಆಯ್ಕೆಗಳೇನೇನು..?  ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸಿದ್ದು ಗುದ್ದು.. ಕುಮಾರ ಜಿದ್ದು.

Video Top Stories