ರಾಜೀನಾಮೆ.. ಇತಿಹಾಸ.. ರಹಸ್ಯ! ಭ್ರಷ್ಟಾಚಾರದ ಆರೋಪಕ್ಕೆ ಪದತ್ಯಾಗ ಮಾಡ್ತಾರಾ ಸಿಎಂ!


ಮುಖ್ಯಮಂತ್ರಿ ಸಿದ್ದರಾಮಯ್ಯನೋರ ಬದುಕಲ್ಲಿ ಕಂಡುಕೇಳರಿಯದ ಕಪ್ಪುಚುಕ್ಕೆಯೊಂದು ಬಂದು ಅಂಟಿಕೊಂಡಿದೆ.. ಶುದ್ಧಹಸ್ತ..ನೈತಿಕತೆ.. ಆರೋಪ.. ಈ ವಿಚಿತ್ರ ವ್ಯೂಹದಲ್ಲಿ ಮುಖ್ಯಮಂತ್ರಿಗಳು ಸಿಲುಕಾಕ್ಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ.21): ಮಾತನಾಡಿದರೆ ಶುದ್ಧಹಸ್ತ.. ನೈತಿಕತೆ ಎನ್ನುತ್ತಿದ್ದ ಸಿಎಂ ಸಿದ್ಧರಾಮಯ್ಯ ಅವರ ಬದುಕಿನಲ್ಲೀಗ ಆರೋಪಗಳ ಸುರಿಮಳೆ. ವಿಚಿತ್ರ ವ್ಯೂಹದಲ್ಲಿ ಮುಖ್ಯಮಂತ್ರಿ ಸಿಲುಕಿಕೊಂಡಿದ್ದಾರೆ. ಹಗರಣವಾಗಿಲ್ಲ ಎಂದು ಹೇಳುವಂತೆಯೂ ಇಲ್ಲ, ಹಗರಣವಾಗಿದೆ ಎಂದು ಹೇಳುವಂತೆಯೂ ಇಲ್ಲ.

ಮಾಜಿ ಮುಖ್ಯಮಂತ್ರಿಗಳ ಹಾದಿಯಲ್ಲಿ ಸಿದ್ದರಾಮಯ್ಯ ಹೆಜ್ಜೆ ಹಾಕ್ತಾರಾ ಎನ್ನುವ ಪ್ರಶ್ನೆಗಳು ಎದ್ದಿದೆ. ತೆರೆದ ಪುಸ್ತಕದಂತಿದ್ದ ಸಿಎಂ ಬದುಕಿಗೆ ಈಗ ಕಪ್ಪುಚುಕ್ಕೆ ಅಂಟಿದೆ. ಶುದ್ಧಹಸ್ತ ಅಂತ ಹೇಳಿಕೊಂಡವರ ಮೇಲೆ ದೊಡ್ಡ ಆರೋಪವೇ ಬಂದಿದೆ. ರಾಜೀನಾಮೆಗೆ ಕೇಸರಿ ಪಡೆ ಪಟ್ಟು ಹಿಡಿದಿದ್ದರೆ, ಹಸ್ತಪಾಳಯ ನೋ ಎಂದು ಹೇಳುತ್ತಿದೆ.

Muda Scam: ವೈಟ್ನರ್‌ ಹಾಕಿ ದಾಖಲೆ ತಿರುಚಿದ ಮುಡಾ ಅಧಿಕಾರಿಗಳು?

ಇನ್ನೊಂದೆಡೆ ಗವರ್ನರ್ ವಿರುದ್ಧ ಕಾಂಗ್ರೆಸ್ ನಾಯಕರು ಮಹಾಮುನಿಸು ತೋರಿದ್ದಾರೆ. ಅದೊಂದು ಆರೋಪಕ್ಕೆ ಅಂದು ಬಂಗಾರಪ್ಪ ರಾಜೀನಾಮೆ ಕೊಟ್ಟು ಹೋಗಿದ್ದರು. ಹೈಕಮಾಂಡ್ ಒತ್ತಡಕ್ಕೆ ಕಟ್ಟುಬಿದ್ದಿದ್ದರು ಅಂದಿನ ಸಿಎಂ ಬೃಹತ್ ಸಂಖ್ಯಾಬಲ ಇದ್ದಾಗಲೂ ಅವರಿಗೆ ಸಿಎಂ ಗದ್ದುಗೆ ಉಳಿದಿರಲಿಲ್ಲ.

Related Video