ಪ್ರಧಾನಿ ರೇಸ್‌ನಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಇಂಡಿ ಒಕ್ಕೂಟದಲ್ಲೇ ವಿರೋಧವೇಕೆ?
ಮಂಗಳವಾರದ ಇಂಡಿ ಒಕ್ಕೂಟದ ಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡುವ ಕುರಿತಂತೆ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಶಿಫಾರಸು ಮಾಡಿದ್ದು ಸಾಕಷ್ಟು ಚರ್ಚೆಯಾಗಿದೆ.
ಬೆಂಗಳೂರು (ಡಿ.20): ಮುಂದಿನ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಗೆ ದೊಡ್ಡ ಸವಾಲು ನೀಡಬೇಕು ಎನ್ನುವ ದೃಷ್ಟಿಯಲ್ಲಿ ರಚಿತವಾಗಿರುವ ಇಂಡಿ ಒಕ್ಕೂಟದಲ್ಲಿ ಪ್ರಮುಖ ವಿಚಾರವೊಂದು ಚರ್ಚೆಯಾಗಿದೆ.
ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಮಂತ್ರಿ ಅಭ್ಯರ್ಥಿಯಾದರೆ ಒಳ್ಳೆಯದು ಎಂದು ಶಿಫಾರಸು ಮಾಡಿದ್ದಾರೆ. ಮೈತ್ರಿಕೂಟದ ಸಭೆಯಲ್ಲೇ ಇದನ್ನು ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಅರವಿಂದ್ ಕೇಜ್ರಿವಾಲ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.
Breaking: ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಖರ್ಗೆ ಹೆಸರು ಶಿಫಾರಸು ಮಾಡಿದ ಮಮತಾ ಬ್ಯಾನರ್ಜಿ!
ಆದರೆ, ಇಂಡಿ ಒಕ್ಕೂಟದ ಇತರ ನಾಯಕರತುಗಳಾದ ನಿತೀಶ್ ಕುಮಾರ್, ಲಾಲೂಪ್ರಸಾದ್ ಯಾದವ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಖರ್ಗೆ ಹೆಸರು ಮುಂಚೂಣಿಗೆ ಬರಲು ಕಾರಣವೇನು? ಉಳಿದವರ ವಿರೋಧವೇಕೆ ಎನ್ನುವುದೇ ಕುತೂಹಲದ ವಿಚಾರವಾಗಿದೆ.