ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ

ಬಿಜೆಪಿ ಬಣಬಡಿದಾಟದ ಚೆಂಡು ಸದ್ಯ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ. ಯತ್ನಾಳ್ ಅವರೇ ಬನ್ನಿ.. ನಮ್ಮ ಪ್ರಶ್ನೆಗೆ ಉತ್ತರಿಸಿ ಎಂದು ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್ಗೆ ಯತ್ನಾಳ್ ಉತ್ತರಿಸಿದ್ದಾರೆ. ಆರು ಪುಟಗಳ ಉತ್ತರ ಕೊಟ್ಟಿದ್ದು, ಆ ಉತ್ತರದಿಂದ ಭಿನ್ನಮತದದ ಬೆಂಕಿ ಆರುತ್ತಾ ಅಥವಾ ಮತ್ತೆ ಧಗಧಗಿಸುತ್ತಾ ಅನ್ನೋ ಆತಂಕ ಪಕ್ಷದೊಳಗೆ ಮನೆ ಮಾಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಡಿ.05): ನಿನಗೆ ನಾನು.. ನನಗೆ ನೀನು ಅಂತಿದ್ದೋರು.. ನಾನಾ ನೀನಾ ಅಂತಿದ್ದಾರೆ. ಶಿಕಾರಿ ವೀರನ ಆಗಿನ ಆಪ್ತ..ಈಗಿನ ಆಜನ್ಮ ವೈರಿ..ಬಿಎಸ್ವೈ ಕುರ್ಚಿ ರಕ್ಷಣೆಗೆ ನಿಂತಿದ್ದ ಕಟ್ಟಪ್ಪ ತಿರುಗಿ ಬಿದ್ದದ್ದೇಕೆ..? ಅಪ್ಪನ ಮಗನ ವಿರುದ್ಧ ಯತ್ನಾಳ್ಗೆ ಯಾಕಿಂಥಾ ದ್ವೇಷ..? ಗಳಸ್ಯ-ಕಂಠಸ್ಯ ಸ್ನೇಹದಲ್ಲಿ ಸೇಡಿನ ಕಿಡಿ ಧಗಧಗಿಸಿದ್ದೇಕೆ..? ಇದು ಕಮಲ ಕೋಟೆಗೆ ಹೊತ್ತಿಕೊಂಡಿರುವ ಬಣ ಬಡಿದಾಟದ ಬೆಂಕಿಯ ಮೂಲದ ಚರಿತ್ರೆ, ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸ್ನೇಹ ಸೇಡು ಜ್ವಾಲಾಗ್ನಿ.

ಸದ್ಯ ರಾಜ್ಯ ಬಿಜೆಪಿಯ ಅಂತರ್ಯುದ್ಧ ದೆಹಲಿ ಅಂಗಳಕ್ಕೆ ತಲುಪಿದೆ. ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್‌ಗೆ ಯತ್ನಾಳ್ ಉತ್ತರಿಸಿದ್ದಾರೆ. ಹಾಗಿದ್ರೆ ಇಲ್ಲಿಗೆ ಈ ಅಂರ್ತಯುದ್ಧ ಅಂತ್ಯವಾಗುತ್ತಾ..? ಅಥವಾ ಮತ್ತಷ್ಟು ಸ್ಟೋಟವಾಗುತ್ತಾ ಅಂತ ನೋಡೋಣ. 

ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್​ಗಳಲ್ಲಿ ಪುಷ್ಪ ರಿಲೀಸ್; ಮೊದಲ ದಿನವೇ 300 ಕೋಟಿ ಮುಟ್ಟುತ್ತಾ?

ಬಿಜೆಪಿ ಬಣಬಡಿದಾಟದ ಚೆಂಡು ಸದ್ಯ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ. ಯತ್ನಾಳ್ ಅವರೇ ಬನ್ನಿ.. ನಮ್ಮ ಪ್ರಶ್ನೆಗೆ ಉತ್ತರಿಸಿ ಎಂದು ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್ಗೆ ಯತ್ನಾಳ್ ಉತ್ತರಿಸಿದ್ದಾರೆ. ಆರು ಪುಟಗಳ ಉತ್ತರ ಕೊಟ್ಟಿದ್ದು, ಆ ಉತ್ತರದಿಂದ ಭಿನ್ನಮತದದ ಬೆಂಕಿ ಆರುತ್ತಾ ಅಥವಾ ಮತ್ತೆ ಧಗಧಗಿಸುತ್ತಾ ಅನ್ನೋ ಆತಂಕ ಪಕ್ಷದೊಳಗೆ ಮನೆ ಮಾಡಿದೆ. ನಮಗೆ ಯತ್ನಾಳ್ ಬಣವೂ ಬೇಡ.. ವಿಜಯೇಂದ್ರ ಬಣವೂ ಬೇಡ..ಇಬ್ಬರು ಮಾಡ್ತಿರೋದು ತಪ್ಪು ಎನ್ನುವ ತಟಸ್ಥ ಗುಂಪೊಂದು ಈಗ ಬಿಜೆಪಿಯೊಳಗೇನು ರೂಪುಗೊಂಡಿದೆ. ಆ ಬಗ್ಗೆ ಡೀಟೈಲ್ ಆಗಿ ತೋರಿಸ್ತೀವಿ. 

ಒಂದು ಕಡೆ ಯತ್ನಾಳ್ ಬಣ.. ಇನ್ನೊಂದು ಕಡೆ ವಿಜಯೇಂದ್ರ ಸೇನೆ.. ಈ ಮಧ್ಯೆ ತಟಸ್ಥರಾಗಿ ಇದ್ದವರು, ಬಣಬಡಿದಾಟವನ್ನ ಖಂಡಿಸೋಕೆ ಶುರು ಮಾಡಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆ.
ರಾಜ್ಯ ಬಿಜೆಪಿಯ ಅಂತರ್ಯುದ್ಧ ಸದ್ಯ ದೆಹಲಿ ಅಂಗಳವನ್ನ ತಲುಪಿದೆ. ಹೈಕಮಾಂಡ್‌ನ ಮುಂದಿನ ನಿರ್ಧಾರ ಏನಾಗಿರುತ್ತೆ ಅನ್ನೋ ಕುತೂಹಲ, ಕಮಲ ಕೋಟೆಯೊಳಗೆ ಕೋಲಾಹಲ ಸೃಷ್ಟಿಸಿದೆ. 

Related Video