ಡಿಕೆಶಿಗೆ ಸೋನಿಯಾ ಗಾಂಧಿ ಕೊಟ್ಟ ಭರವಸೆಗಳೇನು? : 50:50 ಫಾರ್ಮೆಟ್‌ಗೆ ಇಬ್ಬರು ನಾಯಕರ ಒಪ್ಪಿಗೆ ಇದೆಯಾ ?

5 ದಿನಗಳ ನಂತರ ಸಡಿಲಗೊಂಡ ಮುಖ್ಯಮಂತ್ರಿ ಕಗ್ಗಂಟು
ಸಿಎಂ ರೇಸ್ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದುಗೆ ಗೆಲುವಾಗಿದ್ದು ಹೇಗೆ..? 
ಸಿಎಂ ಚೇರ್ ಪಟ್ಟು ಸಡಿಲಿಸಿದ್ದೇಕೆ ಕನಕಪುರ ಬಂಡೆ..? 
ವಿಡಿಯೋ ಕಾಲ್‌ನಲ್ಲಿ ಸೋನಿಯಾ ಹೇಳಿದ ಮಾತುಗಳೇನು..? 

Share this Video
  • FB
  • Linkdin
  • Whatsapp

ಕಾಂಗ್ರೆಸ್ ಗೆಲ್ತಿದ್ದಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಸಿಎಂ ರೇಸ್‌ಗೆ ಬಿದ್ದಿದ್ರು. ಪ್ರಮುಖ ಐದು ಬೇಡಿಕೆಗಳನ್ನು ಹೈಕಮಾಂಡ್ ಮುಂದಿಟ್ಟ ಡಿಕೆಶಿ, ಸಿಎಂ ಚೇರ್‌ಗಾಗಿ ಫೈಟ್‌ ಮಾಡುತ್ತಿದ್ದರು. ಆದ್ರೆ ಡಿಕೆಶಿ ಫೈಟ್‌ಗೆ ಈಗ ಸೋಲಾಗಿದೆ. ಡಿಕೆಶಿಗೆ ಸೋಲಾಗುವುದಕ್ಕೂ ಪ್ರಮುಖ ಐದು ಕಾರಣಗಳಿವೆ ಎನ್ನಲಾಗ್ತಿದೆಎ. ಡಿ.ಕೆ. ಶಿವಕುಮಾರ್ ಕೊನೆಗೂ ಸಿದ್ದರಾಮಯ್ಯನವರಿಗೆ ಸಿಎಂ ಚೇರ್ ಬಿಟ್ಟು ಕೊಟ್ಟಿದ್ದಾರೆ. ಆದ್ರೆ ಡಿಕೆಶಿ ಈಗ ನಾನು ಸೋತಿರಬಹುದು. ಮುಂದೊಂದು ದಿನ ಗೆದ್ದೇ ಗೆಲ್ಲುತ್ತೇನೆಂದು ಹೇಳುತ್ತಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಒಪ್ಪಿಗೆ ಇಲ್ಲದ ಈ ಇಬ್ಬರು ಎರಡುವರೆ ವರ್ಷಗಳ ಕಾಲ ಹೇಗೆ ಸರ್ಕಾರ ನಡೆಸುಕೊಂಡು ಹೋಗುತ್ತಾರೆ?. ಹಾಗೆನೇ ನಂತರ ಏನೆಲ್ಲ ಅಚ್ಚರಿ ಬೆಳವಣೆಗೆಗಳು ನಡೆಯಲಿವೆ ಅನ್ನೋದನ್ನು ನಾವೆಲ್ಲ ಕಾದು ನೋಡಬೇಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಡಿಕೆಶಿಗೆ ಅತಿಯಾದ ಪಕ್ಷ ನಿಷ್ಠೆನೇ ಮುಳುವಾಗ್ತಿದ್ಯಾ? ಸಿಎಂ ರೇಸ್ ಬಿಟ್ಟುಕೊಟ್ಟು ಪಕ್ಷಕ್ಕಾಗಿ ತ್ಯಾಗಿಯಾದ ಬಂಡೆ!

Related Video