Asianet Suvarna News Asianet Suvarna News

Assembly election: ನಾವ್‌ ಸುಮ್ನೆ ಇದ್ರೂ ಕರ್ನಾಟಕದಲ್ಲಿ ಗೆಲ್ಲುತ್ತೇವೆ: ಸಿದ್ಧರಾಮಯ್ಯ

ಗುಜರಾತ್ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಲ್ಲ. ಕರ್ನಾಟಕದಲ್ಲಿ ನಾವು ಸುಮ್ಮನಿದ್ದರೂ ಇಲ್ಲಿ ಗೆಲ್ಲುತ್ತೇವೆ. ಯಾವ ತಂತ್ರಗಾರಿಕೆ ಮಾಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರು (ಡಿ.8): ಗುಜರಾತ್ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಲ್ಲ. ಕರ್ನಾಟಕದಲ್ಲಿ ನಾವು ಸುಮ್ಮನಿದ್ದರೂ ಇಲ್ಲಿ ಗೆಲ್ಲುತ್ತೇವೆ. ಯಾವ ತಂತ್ರಗಾರಿಕೆ ಮಾಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುಜರಾತ್ ನಲ್ಲಿ ಎಎಪಿಗೆ ಬಿಜೆಪಿ ಫಂಡ್ ಮಾಡಿದೆ. ಎಎಪಿ ಗುಜರಾತ್ ನಲ್ಲಿ ಹಣ ಹೊಳೆ ಹರಿಸಿ ಚುನಾವಣೆ ಮಾಡಿದ್ದರು. ಇದರಿಂದ‌ ಕಾಂಗ್ರೆಸ್‌ಗೆ ಗುಜರಾತ್ ನಲ್ಲಿ ಹಿನ್ನಡೆ ಉಂಟಾಗಿದೆ. ಎಎಪಿ ಕಾಂಗ್ರೆಸ್ ಗಿಂತಲು ಹೆಚ್ಚು ಪ್ರಚಾರ ಮಾಡಿದ್ದರೂ ಅವರಿಗೆ ಅವರಿಗೆ ಕಡಿಮೆ ಸೀಟ್ ಬಂದಿದೆ. ಇದಕ್ಕೆಲ್ಲ ಬಿಜೆಪಿಯವರು ಪ್ಲಾನ್‌ ಮಾಡಿದ್ದರು. ಇದೇ ತಂತ್ರಗಾರಿಕೆ ಕರ್ನಾಟಕದಲ್ಲಿ ನಡೆಯಲ್ಲ. ಆದರೆ, ಇಲ್ಲಿ ಬಿಜೆಪಿ ಮಾತ್ರವಲ್ಲದೆ ಅಧಿಕಾರಕ್ಕಾಗಿ ಜೆ.ಡಿ.ಎಸ್ ಕೂಡ ಪ್ರಚಾರ ಮಾಡುತ್ತಿದೆ. ಇಲ್ಲಿ ಜೆ.ಡಿ.ಎಸ್ ಹೊಸ ಪಕ್ಷ ಅಲ್ಲ ಚುನಾವಣೆ ಎದುರಿಸಿದ್ದಾರೆ. 

ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅತಿ ಭ್ರಷ್ಟ ಸರ್ಕಾರವಾಗಿದೆ. ಕರ್ನಾಟಕದ ಆಡಳಿತ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಗುಜರಾತ್ ಅನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಬೇಡಿ. ಕರ್ನಾಟಕದಲ್ಲಿ ಬಿಜೆಪಿ ನಾಯಕರಿಗೆ ತಾವು ಸೋಲುತ್ತೇವೆ ಎಂಬುದು ಗೊತ್ತಿದೆ. ಇಲ್ಲಿ ಕಾಂಗ್ರೆಸ್ ಸಂಘಟನೆ ಶಕ್ತಿಯುತವಾಗಿದೆ. ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಇದು ಕಾಂಗ್ರೆಸ್ ಗೆ ಪ್ಲಸ್ ಆಗಿದೆ. ಗುಜರಾತ್ ನಲ್ಲಿ ಎಎಪಿ ಪಕ್ಷ ಬಹಳ ಹಣ ಖರ್ಚು ಮಾಡಿತು. ಬಿಜೆಪಿನೇ ಎಎಪಿ ಪಕ್ಷಕ್ಕೆ ಫಂಡಿಂಗ್‌ ಮಾಡಿದೆ. ಕಾಂಗ್ರೆಸ್ ಮತ ವಿಭಜನೆಗಾಗಿ ಎಎಪಿ ಪಕ್ಷಕ್ಕೆ  ಬಿಜೆಪಿ ಫಂಡ್‌ ಮಾಡಿತ್ತು. ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಬಿಜೆಪಿ ತಂತ್ರಗಾರಿಕೆ ಮಾಡಬಹುದು. ಆದರೆ ಅದು ಇಲ್ಲಿ ನಡೆಯಲ್ಲ ಎಂದರು.

Video Top Stories