ಮತಯಾಚಿಸಲು ಹೋಗಿ ಮುಖಭಂಗ; ವಿಶ್ವನಾಥ್‌ಗೆ ಯುವಕರಿಂದ ಸಖತ್ ತರಾಟೆ!
ಮತಯಾಚನೆ ವೇಳೆ ವಿಶ್ವನಾಥ್ ಗೆ ಕ್ಲಾಸ್ ತೆಗೆದುಕೊಂಡ ಯುವಕರು, ಗ್ರಾಮದ ರೈತರಿಗೆ ನೀವು ತುಂಬಾ ಕಷ್ಟ ಕೊಟ್ಟಿದ್ದೀರಿ. ನಿಮ್ಮನ್ನು ಗೆಲ್ಲಿಸಿ ಕಳುಹಿಸಿದಕ್ಕೆ ನಮಗೆ ಏನು ಮಾಡಿದ್ದೀರಿ? ಒಂದು ದಿನವಾದ್ರೂ ನಮ್ಮನ್ನು ತಿರುಗಿ ನೋಡಿದ್ರಾ? ಎಂದು ಪ್ರಶ್ನಿಸಿದರು.
ಮೈಸೂರು (ನ.25): ಹುಣಸೂರು ಉಪಚುನಾವಣಾ ಅಖಾಡ ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಬಿಜೆಪಿ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ಗೆ ಮತದಾರರು ತರಾಟೆ ತೆಗೆದುಕೊಂಡಿರುವ ಘಟನೆ
ಹುಣಸೂರಿನ ಶ್ರವಣಹಳ್ಳಿಯಲ್ಲಿ ನಡೆದಿದೆ.
ಮತಯಾಚನೆ ವೇಳೆ ವಿಶ್ವನಾಥ್ ಗೆ ಕ್ಲಾಸ್ ತೆಗೆದುಕೊಂಡ ಯುವಕರು, ಗ್ರಾಮದ ರೈತರಿಗೆ ನೀವು ತುಂಬಾ ಕಷ್ಟ ಕೊಟ್ಟಿದ್ದೀರಿ. ನಿಮ್ಮನ್ನು ಗೆಲ್ಲಿಸಿ ಕಳುಹಿಸಿದಕ್ಕೆ ನಮಗೆ ಏನು ಮಾಡಿದ್ದೀರಿ.?
ಒಂದು ದಿನವಾದ್ರೂ ನಮ್ಮನ್ನು ತಿರುಗಿ ನೋಡಿದ್ರಾ? ಎಂದು ಪ್ರಶ್ನಿಸಿದರು.
ಮತದಾರರ ತರಾಟೆಗೆ ಹೌದು, ಹೌದು ಎಂದು ಸಮಾಧಾನ ಪಡಿಸಿದ ವಿಶ್ವನಾಥ್, ಪೊಲೀಸರ ಭದ್ರತೆಯಲ್ಲಿ ಪ್ರಚಾರ ಮುಂದುವರಿಸಿದರು. ಡಿ.05ಕ್ಕೆ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಡಿ.09ಕ್ಕೆ ಮತ ಎಣಿಕೆ ನಡೆಯಲಿದೆ.