Viral Video: ಮೋದಿ ಮೋದಿ ಎಂದು ಘೋಷಣೆ ಕೂಗಿ ಸಿದ್ದರಾಮಯ್ಯಗೆ ಸ್ವಾಗತ!

ಬಸವನಬಾಗೇವಾಡಿಗೆ ತೆರಳಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಕಾರ್‌ನ ಎದುರು ಸ್ಥಳೀಯ ಜನರು ಮೋದಿ ಮೋದಿ ಎಂದು ಘೋಷಣೆ ಕೂಗಿದಿದ್ದಾರೆ. ಇದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಇರುಸುಮುರಿಸು ಉಂಟುಮಾಡಿತು.
 

Share this Video
  • FB
  • Linkdin
  • Whatsapp

ವಿಜಯಪುರ (ಫೆ.23): ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಜಾಧ್ವನಿ ಯಾತ್ರೆಯ ನಿಮಿತ್ತವಾಗಿ ವಿಜಯಪುರದಲ್ಲಿದ್ದರು. ಬಸವನಬಾಗೇವಾಡಿಯಲ್ಲಿ ಅವರ ಕಾರ್‌ನ ಎದುರು ಜನರು ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ಸ್ವಾಗತಿಸಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಬುಧವಾರ ನಡೆದ ಪ್ರಜಾಧ್ವನಿಯ ಯಾತ್ರೆ ಮುಗಿಸಿ ವಾಪಾಸ್‌ ಹೋಗುವಾಗ, ರಸ್ತೆಬದಿಯಲ್ಲಿ ನಿಂತಿದ್ದ ಯುವಕರು, ಜೈ ಶ್ರೀರಾಮ್‌.. ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ಅವರನ್ನು ಸ್ವಾಗತಿಸಿದ್ದಾರೆ. ಇದರಿಂದ ಸಿದ್ಧರಾಮಯ್ಯ ಅವರು ಮುಜುಗರಕ್ಕೂ ಒಳಗಾದರು.

Related Video