
ಚಿತ್ರದುರ್ಗ: ಹಿರಿಯೂರಲ್ಲಿ ಕಾಂಗ್ರೆಸ್ ಮುಖಂಡರ ಮಾರಾಮಾರಿ, ವಿಡಿಯೋ ವೈರಲ್!
ಸಚಿವ ಡಿ ಸುಧಾಕರ್ ಬೆಂಬಲಿಗರ ನಡುವೆ ಮಾರಾಮಾರಿಯಾದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ನಡೆದಿದೆ. ಪಂಚಾಯತ್ ರಾಜ್ ಕಾಮಗಾರಿ ಟೆಂಡರ್ ವಿಚಾರಕ್ಕೆ ಮಾರಾಮಾರಿಯಾಗಿದ್ದು, ಕಂದಿಕೆರೆ ಜಗದೀಶ್ ಮನೆಗೆ ನುಗ್ಗಿ ಕೇಶವಮೂರ್ತಿ ಹಲ್ಲೆ ಮಾಡಿದ್ದಾರೆ.
ಚಿತ್ರದುರ್ಗ (ಮಾ.19): ಸಚಿವ ಡಿ ಸುಧಾಕರ್ ಬೆಂಬಲಿಗರ ನಡುವೆ ಮಾರಾಮಾರಿಯಾದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ನಡೆದಿದೆ. ಪಂಚಾಯತ್ ರಾಜ್ ಕಾಮಗಾರಿ ಟೆಂಡರ್ ವಿಚಾರಕ್ಕೆ ಮಾರಾಮಾರಿಯಾಗಿದ್ದು, ಕಂದಿಕೆರೆ ಜಗದೀಶ್ ಮನೆಗೆ ನುಗ್ಗಿ ಕೇಶವಮೂರ್ತಿ ಹಲ್ಲೆ ಮಾಡಿದ್ದಾರೆ. ಸದ್ಯ ಹಿರಿಯೂರು ಪಟ್ಟಣದ ಲಕ್ಮಮ್ಮ ಲೇಔಟ್‌ನ ಮನೆಯಲ್ಲಿ ಘಟನೆ ನಡೆದಿದೆ. ಇನ್ನು ಕೇಶವಮೂರ್ತಿ, ಕಂದಿಕೆರೆ ಜಗದೀಶ್ ಮಾರಾಮಾರಿ ವಿಡಿಯೋ ವೈರಲ್ ಆಗಿದ್ದು, ಹಿರಿಯೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.