ಮೈಸೂರಿನಲ್ಲಿ ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಟೆನ್ಷನ್‌ ,ಶಾಸಕ ರಾಮದಾಸ್‌ ವಿರುದ್ಧ ಕಂಪ್ಲೇಂಟ್

ಮೈಸೂರಿನಲ್ಲಿ ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಟೆನ್ಷನ್‌ ಆರಂಭವಾಗಿದ್ದು, ರಾಮದಾಸ್‌ ವಿರುದ್ದ ಲಿಂಗಾಯತ ಸಮುದಾಯ ಬಂಡಾಯವೆದ್ದಿದೆ.

Share this Video
  • FB
  • Linkdin
  • Whatsapp

ಮೈಸೂರಿನಲ್ಲಿ ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಟೆನ್ಷನ್‌ ಆರಂಭವಾಗಿದ್ದು, ರಾಮದಾಸ್‌ ವಿರುದ್ದ ಲಿಂಗಾಯತ ಸಮುದಾಯ ಬಂಡಾಯವೆದ್ದಿದೆ. ಬ್ರಾಹ್ಮಣ, ಒಕ್ಕಲಿಗ ನಂತರ ಲಿಂಗಾಯತರಿಂದ ಟಿಕೆಟ್‌ಗೆ ವಿರೋಧ ವ್ಯಕ್ತವಾಗಿದ್ದು, ಕೆ. ಆರ್‌ ಕ್ಷೇತ್ರದಿಂದ ರಾಮದಾಸ್‌ಗೆ ಟಿಕೆಟ್‌ ನೀಡದಂತೆ ಒತ್ತಡ ಹೇರಲಾಗಿದೆ. ಲಿಂಗಾಯತ ಮುಖಂಡರು ರಾಮದಾಸ್‌ ವಿರುದ್ದ ಬಿಎಸ್‌ವೈ ಭೇಟಿಯಾಗಿ ದೂರು ನೀಡಿದ್ದಾರೆ. ಹಾಗೆ ಸಿ ಎಂ ಬೊಮ್ಮಾಯಿಗೂ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಲಿಂಗಾಯತರನ್ನು ರಾಮದಾಸ್‌ ಕಡೆಗಣಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಯಾರಿಗೆ ಬೇಕಾದ್ರೂ ಟಿಕೆಟ್‌ ಕೊಡಿ ಆದರೆ ರಾಮದಾಸ್‌ಗೆ ಮಾತ್ರ ಬೇಡ ಎಂದು ತಿಳಿಸಲಾಗಿದೆ. 

Related Video