ಬಿಎಸ್‌ವೈ ಸಂಪುಟದಲ್ಲಿ ಭಾರೀ ಬದಲಾವಣೆ, ಯಾರಿಗೆ ಯಾವ ಖಾತೆ..?

 ಸಂಭಾವ್ಯ ಖಾತೆ ಹಂಚಿಕೆಯನ್ನು ನೋಡುವುದಾದರೆ, ಬಸವರಾಜ ಬೊಮ್ಮಾಯಿಯವರಿಗೆ ಗೃಹ, ಕಾನೂನು- ಸಂಸದಿಯ ಖಾತೆ, ಅರವಿಂದ ಲಿಂಬಾವಳಿಯವರಿಗೆ ಅರಣ್ಯ, ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮುಜರಾಯಿ, ಹಿಂದುಳಿದ ವರ್ಗ, ಉಮೇಶ್ ಕತ್ತಿಯವರಿಗೆ ಆಹಾರ ಖಾತೆ ನೀಡುವ ಸಂಭವವಿದೆ. 

First Published Jan 21, 2021, 10:14 AM IST | Last Updated Jan 21, 2021, 10:14 AM IST

ಬೆಂಗಳೂರು (ಜ. 21): ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆಗೆ ಸಿಎಂ ಮುಂದಾಗಿದ್ದಾರೆ. ಸಂಭಾವ್ಯ ಖಾತೆ ಹಂಚಿಕೆಯನ್ನು ನೋಡುವುದಾದರೆ, ಬಸವರಾಜ ಬೊಮ್ಮಾಯಿಯವರಿಗೆ ಗೃಹ, ಕಾನೂನು- ಸಂಸದಿಯ ಖಾತೆ, ಅರವಿಂದ ಲಿಂಬಾವಳಿಯವರಿಗೆ ಅರಣ್ಯ, ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮುಜರಾಯಿ, ಹಿಂದುಳಿದ ವರ್ಗ, ಉಮೇಶ್ ಕತ್ತಿಯವರಿಗೆ ಆಹಾರ ಖಾತೆ ನೀಡುವ ಸಂಭವವಿದೆ. 

ಜನರ ಕಚೇರಿ ಅಲೆದಾಟಕ್ಕೆ ಬ್ರೇಕ್ ; ಹಳ್ಳಿಗಳಿಗೆ ಬರುತ್ತೆ ಡಿಸಿ ಆಫೀಸ್..!

ಎಂಟಿಬಿ ನಾಗರಾಜ್ ಅವರಿಗೆ ಅಬಕಾರಿ ಖಾತೆ ನೀಡಲಾಗಿದೆ ಎನ್ನಲಾಗಿದ್ದು, ಆದರೆ ಎಂಟಿಬಿ ನಾಗರಾಜ್ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚರ್ಚಿಸಲು ಸಿಎಂ ಮನೆಗೆ ತೆರಳಿದ್ದಾರೆ. ಇನ್ನು ಯೋಗೇಶ್ವರ್ ಅವರಿಗೆ ಸಣ್ಣ ನೀರಾವರಿ, ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣ ಹಾಗೂ ಕನ್ನಡ -ಸಂಸ್ಕೃತಿ ಖಾತೆ ನೀಡಲಾಗಿದೆ ಎನ್ನಲಾಗಿದೆ. ಅಧಿಕೃತವಾಗಿ ಘೋಷಣೆ ಹೊರಬರಬೇಕಿದೆ.