ಬೆದರಿಕೆ ಪತ್ರ ಬರೆದವರು ನಮ್ಮ ಸಿನಿಮಾ ಇಂಡಸ್ಟ್ರಿಯವರೇ: ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಈ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ರೆಡಿ ಆಗಿದ್ದಾರೆ. ಸ್ಟಾರ್ ಪ್ರಚಾರಕನಾಗಿ ಕಮಲ ಪಾಳಯದ ಪರ ಅವರು ಕ್ಯಾಂಪೇನ್ ಮಾಡಲಿದ್ದಾರೆ ಎನ್ನುವ ಸದ್ದು ವೈರಲ್ ಆಗುತ್ತಿದ್ದಂತೆ.
ಕಿಚ್ಚ ಸುದೀಪ್ ಈ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ರೆಡಿ ಆಗಿದ್ದಾರೆ. ಸ್ಟಾರ್ ಪ್ರಚಾರಕನಾಗಿ ಕಮಲ ಪಾಳಯದ ಪರ ಅವರು ಕ್ಯಾಂಪೇನ್ ಮಾಡಲಿದ್ದಾರೆ ಎನ್ನುವ ಸದ್ದು ವೈರಲ್ ಆಗುತ್ತಿದ್ದಂತೆ. ಸುದೀಪ್ಗೆ ಬೆದರಿಕೆ ಪತ್ರ ಬಂದಿತ್ತು. ಸುದೀಪ್ ಮ್ಯಾನೇಜರ್ ಜಾಕ್ ಮಂಜುಗೆ ಈ ಪತ್ರ ಸಿಕ್ಕಿದೆ. ಈ ಪತ್ರದಲ್ಲಿ ಸುದೀಪ್ ಬಗ್ಗೆ ಕೆಟ್ಟ ಪದಗಳ ಬಳಕೆ ಆಗಿದೆ. ಸುದೀಪ್ ಅವರ ಖಾಸಗಿ ವಿಡಿಯೋ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಲಾಗಿದೆ. ‘ನಟನ ಘನತೆಗೆ ಧಕ್ಕೆ ತರಲು ಮಾಡಿರೋ ಸಂಚು’ ಎಂದು ಮಂಜು ಅವರು ದೂರಿದ್ದಾರೆ. ಪುಟ್ಟೇನಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಈ ಪತ್ರ ಎಲ್ಲಿಂದ ಬಂತು, ಯಾರು ಕಳುಹಿಸಿದ್ದು ಎನ್ನುವ ತನಿಖೆ ನಡೆಯುತ್ತಿದೆ. ಈ ಪ್ರಕರಣ ಈಗ ಸಿಸಿಬಿಗೆ ವರ್ಗಾವಣೆ ಆಗಿದೆ. ಈ ನಡುವೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು ಇದು ಯಾರು ಮಾಡಿದ್ದೆಂದು ನನಗೆ ಗೊತ್ತಿದೆ. ಪತ್ರ ಬರೆದದ್ದು ನಮ್ಮ ಸಿನಿಮಾ ಇಂಡಸ್ರಿ್ ಯವರೆ ಎಂದು ಅಚ್ಚರಿ ಮೂಡಿದ್ದಾರೆ ಕಿಚ್ಚ ಸುದೀಪ್.