Suvarna special: ಸಿಎಂ ಬೊಮ್ಮಾಯಿಗೆ ಕೈ ಖೆಡ್ಡಾ..! ಹೇಗಿದೆ ಕಾಂಗ್ರೆಸ್ ಟಿಕೆಟ್ ವಾರ್..?
ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿಯೇ ಸಿಂಗಲ್ ಟಿಕೆಟ್ ಘೋಷಣೆ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ಖೆಡ್ಡಾ ತೋಡಿದೆ.
ಬೆಂಗಳೂರು (ಮಾ.18): ರಾಜ್ಯದಲ್ಲಿ ಒಟ್ಟು 224 ಕ್ಷೇತ್ರಗಳಿದ್ದು, ಕಾಂಗ್ರೆಸ್‌ನಿಂದ 1350 ಮಂದಿ ಆಕಾಂಕ್ಷಿಗಳಿದ್ದಾರೆ. ಹಾಗಾದೆ, ಟಿಕೆಟ್ ವಂಚಿತರ ಓಲೈಕೆಗೆ ಕಾಂಗ್ರೆಸ್ ಬಹ್ಮಾಸ್ತ್ರ ಬಳಸಲು ಮುಂದಾಗಿದೆ. ಇನ್ನು ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿಯೇ ಸಿಂಗಲ್ ಟಿಕೆಟ್ ಘೋಷಣೆ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ಖೆಡ್ಡಾ ತೋಡಿದೆ.
ಬಿಜೆಪಿ, ಜೆಡಿಎಸ್ ಕ್ಷೇತ್ರಗಳಲ್ಲೇ ಕೈ ಸಿಂಗಲ್ ಟಿಕೆಟ್ ಸೂತ್ರ..! ಟಿಕೆಟ್ ಯುದ್ಧದಲ್ಲಿ ಸಿದ್ದು-ಡಿಕೆ ಸೀಕ್ರೆಟ್ ಗೇಮ್..! ಸಿಎಂ ಬೊಮ್ಮಾಯಿಗೆ ಕೈ ಖೆಡ್ಡಾ.. ಹೇಗಿದೆ ಟಿಕೆಟ್ ವಾರ್..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸಿಂಗಲ್ ಟಿಕೆಟ್ ಸೀಕ್ರೆಟ್. ಕುರುಕ್ಷೇತ್ರದ ಅಖಾಡಕ್ಕೆ ರೆಡಿಯಾದ್ರು ಕಾಂಗ್ರೆಸ್ ಸಮರ ಸೈನಿಕರು.. 120 ಕ್ಷೇತ್ರಗಳಿಗೆ ಕೈ ಅಭ್ಯರ್ಥಿಗಳ ಹೆಸರು ಫೈನಲ್, ಕೈ ಮೊದಲ ಪಟ್ಟಿಯಲ್ಲಿದೆ ಇಂಟ್ರೆಸ್ಟಿಂಗ್ ಲೆಕ್ಕಾಚಾರ. ತೆನೆ-ಕಮಲ ಕೋಟೆಗಳ ಬೇಟೆಗೆ ಕೈ ಪಾಳೆಯದಲ್ಲಿ ರೆಡಿಯಾಗಿರೋ ಸಮರವ್ಯೂಹ ಎಂಥದ್ದು..? ಮೊದಲ ಟಿಕೆಟ್ ಯುದ್ಧದಲ್ಲಿ ಗೆದ್ದದ್ದು ಯಾರು..? ಸಿದ್ದರಾಮಯ್ಯನವ್ರಾ, ಡಿಕೆಶಿನಾ..? ಕೈ ಸಿಂಗಲ್ ಟಿಕೆಟ್ ಸೀಕ್ರೆಟ್'ನ ಅಸಲಿ ಗುಟ್ಟು ಇಲ್ಲಿದೆ ನೋಡಿ.
ಟಿಕೆಟ್ ಯುದ್ಧದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕಾಂಪ್ರಮೈಸ್ ಮಾಡ್ಕೊಂಡ್ರಾ..? ಆ ಕಾಂಪ್ರಮೈಸ್'ನ ಅಸಲಿ ಗುಟ್ಟೇನು..? 120 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಿರೋ ಎಐಸಿಸಿ ಬಾಸ್ ಖರ್ಗೆ, ಅಭ್ಯರ್ಥಿಗಳಿಗೆ ಕೊಟ್ಟ ಸೀಕ್ರೆಟ್ ಸೂಚನೆ ಏನು..? ಎಂಬುದಕ್ಕೆ ಇಲ್ಲಿದೆ ಉತ್ತರ.