Asianet Suvarna News Asianet Suvarna News

ನಿಂಬೆಹಣ್ಣು ಮಾರುತ್ತಿದ್ದ ಹುಡುಗ ಸಿಎಂ: ಬಿಎಸ್‌ವೈ ಜೀವನ ಚರಿತ್ರೆಯಲ್ಲಿ ಸ್ಫೋಟಕ ಸತ್ಯ

ರಾಜ್ಯದಲ್ಲೀಗ ಆತ್ಮಚರಿತ್ರೆಗಳ ಸುಗ್ಗಿಕಾಲ. ಕರ್ನಾಟಕದ ಮೂವರು ರಾಜಕೀಯ ದಿಗ್ಗಜರ ಜೀವನಚರಿತ್ರೆಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗ್ತಾ ಇವೆ. ಮೊದಲು ಎಸ್.ಎಂ ಕೃಷ್ಣ, ನಂತ್ರ ದೇವೇಗೌಡ್ರು, ಬಳಿಕ ಯಡಿಯೂರಪ್ಪ. ಮುಖ್ಯಮಂತ್ರಿ ಯಡಿಯೂರಪ್ಪನವರ ರೋಚಕ ಜೀವನಕಥೆ ರೆಡಿಯಾಗ್ತಿದೆ. ಜನ್ಮದಿನಕ್ಕೆ ಬಿಡುಗಡೆಯಾಗಲಿರುವ ಬಿಎಸ್‌ವೈ ಜೀವನಚರಿತ್ರೆಯೇ ತ್ರಿವಿಕ್ರಮ ಯಡಿಯೂರಪ್ಪ.

ಬೆಂಗಳೂರು[ಡಿ.27]: ಯಡಿಯೂರಪ್ಪನವರಿಗೆ ಅದೃಷ್ಟ ತಂದ ವರ್ಷ 2008. ದಳಪತಿಗಳ ವಚನಭ್ರಷ್ಟತೆಯನ್ನೇ ಅಸ್ತ್ರವಾಗಿಸಿಕೊಂಡು ಚುನಾವಣೆ ಗೆದ್ದ ಯಡಿಯೂರಪ್ಪ 3 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಯಶಸ್ವಿ ಆಡಳಿತ ನಡೆಸ್ತಾರೆ. ಆದ್ರೆ ಈ ಗ್ರಹಣ ಅನ್ನೋದು ಉರಿಯೋ ಸೂರ್ಯನನ್ನೂ ಬಿಡೋದಿಲ್ಲ. ಹಾಗೆಯೇ ಯಡಿಯೂರಪ್ಪನವರಿಗೆ ಹಿಡಿದ ಗ್ರಹಣದ ಪರಿಣಾಮ ಅವರು ಜೈಲಿಗೂ ಹೋಗಬೇಕಾಗುತ್ತೆ.

ಜನವರಿ ಅಂತ್ಯಕ್ಕೂ ಸಚಿವ ಸಂಪುಟ ವಿಸ್ತರಣೆ ಇಲ್ಲ?

ಯಡಿಯೂರಪ್ಪನವರ ಜೀವನಚರಿತ್ರೆ 40 ಅಧ್ಯಾಯಗಳಲ್ಲಿ ಹೊರಬರಲಿದೆ. ಅಷ್ಟಕ್ಕೂ ರಾಜಾಹುಲಿಯ ಜೀವನಚರಿತ್ರೆಯನ್ನು ಮಹಾದೇವ ಪ್ರಕಾಶ್ ಸಿದ್ಧ ಮಾಡ್ತಿರೋದು ಹೇಗೆ..?

ಯಡಿಯೂರಪ್ಪನವರ ದೈತ್ಯ ನಾಯಕನ ಜೀವನಚರಿತ್ರೆಯನ್ನು ಪುಸ್ತಕದ ರೂಪದಲ್ಲಿ ತರೋದಂದ್ರೆ ಅದು ಸಾಮಾನ್ಯ ಮಾತಲ್ಲ. ಅದಕ್ಕೆ ಸಾಕಷ್ಟು ರೀಸರ್ಚ್'ಗಳು ಬೇಕೇ ಬೇಕು. ತ್ರಿವಿಕ್ರಮ ಯಡಿಯೂರಪ್ಪನವರ ಜೀವನ ಚರಿತ್ರೆ ಹೇಗೆ ಸಿದ್ಧವಾಗ್ತಿದೆ?

ಮತ್ತೆ ಯಡಿಯೂರಪ್ಪ ಜೊತೆ ಜೆಡಿಎಸ್‌ನ ಹೊರಟ್ಟಿ ಭೇಟಿ ಸಸ್ಪೆನ್ಸ್‌!

ಬೂಕನಕೆರೆಯ ಭೂಪ ಶಿಕಾರಿವೀರನಾಗಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದೇ ಒಂದು ರೋಚಕ ಕಥೆ. ಇದು ಹೇಗೆ ಸಾಧ್ಯವಾಯ್ತು ಅನ್ನೋದನ್ನು ವಿಸ್ತೃತವಾಗಿ ತಿಳಿದುಕೊಳ್ಳಬೇಕಾದ್ರೆ ಫೆಬ್ರವರಿ 27ರವರೆಗೆ ಕಾಯಲೇಬೇಕು. 

ಡಿಸೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories