Suvarna Focus: ದೊಡ್ಡಗೌಡರ ಭದ್ರಕೋಟೆಯಲ್ಲಿ ಪ್ರಧಾನಿ! ಮಂಡ್ಯದಲ್ಲಿ ಮೋದಿಗಿರಿ ಪ್ರದರ್ಶನ!

ಮಂಡ್ಯದಲ್ಲಿ ಮೋದಿಗಿರಿಯನ್ನು ನಡೆಸಲಾಗಿದೆ. ಮಂಡ್ಯ ಜನರ ಪ್ರೀತಿಗೆ ಮರುಳಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿರಬಾಗಿ ನಮಸ್ಕಾರ ಮಾಡಿದ್ದಾರೆ. ಇನ್ನು ಸಬ್‌ಕೋ ಸಾಥ್‌ ಸಬ್‌ಕಾ ವಿಕಾಸ್‌ ಮಂತ್ರವನ್ನು ಪಠಿಸಿದ್ದಾರೆ.

First Published Mar 13, 2023, 4:36 PM IST | Last Updated Mar 13, 2023, 4:36 PM IST

ಬೆಂಗಳೂರು (ಮಾ.13): ಹಸಿರು ಶಾಲು.. ಮೈಸೂರು ಪೇಟ ಧರಿಸಿ ಮೋದಿ ಝಗಮಗ ಅಂತಿದ್ರು.. ಕೈಲಿ ಮಂಡ್ಯ ಬೆಲ್ಲ ಇಟ್ಕೊಂಡಿದ್ದ ಮೋದಿ ಅವರ ಅಬ್ಬರ ಮಧುರ ನಗರದಲ್ಲಿ  ಹೇಗಿತ್ತು ಗೊತ್ತಾ..? ದೊಡ್ಡಗೌಡರ ಭದ್ರಕೋಟೆಯಲ್ಲಿ ಮೋದಿ ಹೆಣೆದ ವಿಚಿತ್ರ ವ್ಯೂಹ ಎಂಥದ್ದು ಗೊತ್ತಾ..? ಜಿಡಿಎಸ್ ಹೆಸರೂ ಹೇಳಲಿಲ್ಲ.. ಕಾಂಗ್ರೆಸ್ ವಿರುದ್ಧ ಹರಿಹಾಯೋದು ಮರೀಲಿಲ್ಲ.. ಈ ತಂತ್ರವೇ ಮಂಡ್ಯದಲ್ಲಿ ಕಮಲ ಅರಳಿಸುತ್ತಾ.? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಮಂಡ್ಯದಲ್ಲಿ ಮೋದಿಗಿರಿ..
ಮಂಡ್ಯದಲ್ಲಿ ಮೋದಿಗಿರಿಯನ್ನು ನಡೆಸಲಾಗಿದೆ. ಮಂಡ್ಯ ಜನರ ಪ್ರೀತಿಗೆ ಮರುಳಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿರಬಾಗಿ ನಮಸ್ಕಾರ ಮಾಡಿದ್ದಾರೆ. ಇನ್ನು ಸಬ್‌ಕೋ ಸಾಥ್‌ ಸಬ್‌ಕಾ ವಿಕಾಸ್‌ ಮಂತ್ರವನ್ನು ಪಠಿಸಿದ್ದಾರೆ. ಇನ್ನು ಮೈಸೂರು ಸಾಮ್ರಾಜ್ಯದ ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ವಿಶ್ವೇಶ್ವರಯ್ಯ ಅವರ ಕಾರ್ಯ ವೈಖರಿಯ ಬಗ್ಗೆ ದೇಶವೇ ಕೊಂಡಾಡಿದ ಬಗ್ಗೆ ಮಂಡ್ಯದ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಕರ್ನಾಟಕದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು, ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ಕೂಡ ಮಂಡ್ಯದ ಜನರು ನಿರ್ಧಾರ ಮಾಡುತ್ತಾರೆ. ಮಂಡ್ಯ ನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಥಮ ಬಾರಿಗೆ ಆಗಮಿಸಿದ್ದರು. ಹೀಗಾಗಿ, 50ಕ್ಕೂ ಅಧಿಕ ಕಲಾತಂಡಗಳು, 500ಕ್ಕೂ ಅಧಿಕ ಕಲಾವಿದರು ಹಾಗೂ ಲಕ್ಷಾಂತರ ಅಭಿಮಾನಿಗಳು ಅವರನ್ನು ನೋಡಲು ಹಾಗೂ ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದರು. ಅಂತೂ ಇಂತೂ ಮೋದಿ ಸಕ್ಕರೆ ನಾಡಿನಲ್ಲಿ ಹವಾ ಮೆರೆಸಲು ಸಾಧ್ಯವಾಗಿದೆ. 

Video Top Stories