Asianet Suvarna News Asianet Suvarna News

ಬಸವರಾಜ್ ಮತ್ತಿಮೂಡ್‌ಗೆ ಸಚಿವ ಸ್ಥಾನ ನೀಡುವಂತೆ ಬೃಹತ್ ಪ್ರತಿಭಟನಾ ಮೆರವಣಿಗೆ

Jul 30, 2021, 7:28 PM IST

ಕಲಬುರಗಿ, (ಜು.30): ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಇತ್ತ ಸಂಪುಟ ರಚನೆ ವಿಚಾರ ಗರಿಗೆದರುತ್ತಿದೆ. 

ಹೊಸ ಸಂಪುಟಕ್ಕೆ ವಲಸಿಗರು : ಈ ಬಗ್ಗೆ ಬಿಎಸ್‌ವೈರಿಂದಲೇ ಅಂತಿಮ ನಿರ್ಣಯ

ಹಲವು ಶಾಸಕರು ಸಚಿವ ಸ್ಥಾನಕ್ಕೆ ಬೇರೆ-ಬೇರೆ ಮಾರ್ಗಗಳಲ್ಲಿ ಕಸರತ್ತು ನಡೆಸಿದ್ದಾರೆ. ಅದರಂತೆ ಕಲಬುರಗಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯೇ ನಡೆದಿದೆ.