ಯಾವ ಪಕ್ಷ ಅಧಿಕಾರದಲ್ಲಿ ಇರುತ್ತೋ ಅಂತಹ ಪಾರ್ಟಿಗೆ ಹಾರೋ ವ್ಯಕ್ತಿ ಹೆಬ್ಬಾರ್‌: ಭೀಮಣ್ಣ ನಾಯ್ಕ್ ಆಕ್ರೋಶ

ಮಾಜಿ ಸಚಿವ, ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್‌ನಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಶಾಸಕ ಶಿವರಾಮ ಹೆಬ್ಬಾರ್ ವಿರುದ್ಧ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಹರಿಹಾಯ್ದಿದ್ದಾರೆ. 

First Published Aug 19, 2023, 6:58 PM IST | Last Updated Aug 19, 2023, 6:58 PM IST

ಶಿರಸಿ (ಆ.19): ಮಾಜಿ ಸಚಿವ, ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್‌ನಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಶಾಸಕ ಶಿವರಾಮ ಹೆಬ್ಬಾರ್ ವಿರುದ್ಧ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಹರಿಹಾಯ್ದಿದ್ದಾರೆ. ಯಾವ ಪಕ್ಷ ಅಧಿಕಾರದಲ್ಲಿ ಇರುತ್ತೋ ಅಂತಹ ಪಾರ್ಟಿಗೆ ಹಾರೋ ವ್ಯಕ್ತಿಗಳು ಇವರು. ಅಂದು ಅಧಿಕಾರ ಹಣಕ್ಕಾಗಿ ಬಿಜೆಪಿಗೆ ಓಡಿ ಹೋದ್ರು. ಇದೀಗ ಮತ್ತೆ ಅಧಿಕಾರ ಇರುವ ಕಾಂಗ್ರೆಸ್‌ಗೆ ಬರಲು ಹೊರಟಿದ್ದಾರೆ ಎಂದು ಗುಡುಗಿದ್ದಾರೆ. ಅಂದ್ರೆ ಅಧಿಕಾರ, ಹಣ ಇಷ್ಟೇ ಇವರ ಉದ್ದೇಶ. ಯಾವ ಉದ್ದೇಶಕ್ಕೆ ಇವರು ಕಾಂಗ್ರೆಸ್‌ಗೆ ಬರ್ತಿದ್ದಾರೆ ಅನ್ನೋದನ್ನು ಜನರಿಗೆ, ಕಾರ್ಯಕರ್ತರಿಗೆ ತಿಳಿಸಲಿ. ಇಂತಹ ಭಂಡ ರಾಜಕಾರಣ ಮಾಡುವುದನ್ನು ಶಿವರಾಮ್ ಹೆಬ್ಬಾರ್ ಮೊದಲು ಬಿಡಲಿ ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಕಿಡಿಕಾರಿದ್ದಾರೆ.