ಕೇಂದ್ರ ಬಜೆಟ್ ಬಡವರು, ಮಧ್ಯಮವರ್ಗ ವಿರೋಧಿ; ಕಾರ್ಪೋರೆಟ್ ಪರ: ಸಿದ್ದರಾಮಯ್ಯ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಬಡವ, ಮಧ್ಯಮ ವರ್ಗ ವಿರೋಧಿಯಾಗಿದೆ ಹಾಗೂ ಕಾರ್ಪೊರೇಟ್ ಪರ ಎಂದೂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಕೇಂದ್ರ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಕರ್ನಾಟಕ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಕೃಷಿ, ನೀರಾವರಿ, ಕೈಗಾರಿಕೆಗೆ ಹೆಚ್ಚು ಅನುದಾನ ಸಿಕ್ಕಿಲ್ಲ. ಸಮಾಜ ಕಲ್ಯಾಣ ಇಲಾಖೆಗೂ ಹೆಚ್ಚು ಅನುದಾನ ಸಿಕ್ಕಿಲ್ಲ. ನರೇಗಾ ಯೋಜನೆಗೆ 29 ಸಾವಿರ ಕೋಟಿ ಅನುದಾನ ಕಡಿಮೆಯಾಗಿದೆ. ಅಲ್ಲದೆ, ಆರ್ಥಿಕ ವರ್ಷ 2023 - 24 ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಬಡವ, ಮಧ್ಯಮ ವರ್ಗ ವಿರೋಧಿಯಾಗಿದೆ ಹಾಗೂ ಕಾರ್ಪೊರೇಟ್ ಪರ ಎಂದೂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.