ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಜಟಾಪಟಿ: ಸರ್ಕಾರದ ಈ ನಡೆ ಹಿಂದಿದ್ಯಾ ಸಿದ್ದು ಸೇಫ್ ಗೇಮ್?

ಹುಬ್ಬಳ್ಳಿ ಕೇಸ್ ವಾಪಸ್ ವಿಚಾರ ಮುಂದಿಟ್ಟು ಸರ್ಕಾರವನ್ನ ಮತ್ತೊಮ್ಮೆ ಹೆಣೆಯೋಕೆ ಬಿಜೆಪಿ ಸಜ್ಜಾಗಿದ್ರೆ, ಕಮಲ ನಾಯಕರ ಬಾಯಿ ಮುಚ್ಚಿಸೋಕು ಸರ್ಕಾರ ಒಂದು ಅಸ್ತ್ರ ಇಟ್ಕೊಂಡಿದೆ. ಅದ್ರ ಜೊತೆಗೆ ಸಿಎಂ ಸಿದ್ದರಾಮಯ್ಯ ತಮ್ಮ ಕುರ್ಚಿ ಸೇಫ್ ಮಾಡ್ಕೊಳ್ಳೋಕೆ ಈ ತೀರ್ಮಾನಕ್ಕೆ ಬಂದಿದ್ದಾರೆ ಅನ್ನೋ ಮಾತುಗಳು ಇವೆ. 
 

First Published Oct 12, 2024, 11:34 AM IST | Last Updated Oct 12, 2024, 11:34 AM IST

ಹುಬ್ಬಳ್ಳಿ(ಅ.12):  ಗಲಭೆ ಕಂಡು ಕೇಳರಿಯದ ಭಯಾನಕ ಗಲಭೆಗೆ ಅಂದು ಸಾಕ್ಷಿಯಾಗಿತ್ತು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ. ಖಾಕಿ ಮೇಲೆ ಕಲ್ಲು ತೂರಿದವರು, ಪೊಲೀಸ್ ವಾಹನವನ್ನ ಪುಡಿಗಟ್ಟಿದವರು ಅಮಾಯಕರಂತೆ. ಕರುನಾಡೇ ಬೆಚ್ಚಿ ಬಿದ್ದಿದ್ದ ಗಲಭೆ ಪ್ರಕರಣದ ಕೇಸನ್ನೇ ವಾಪಸ್ ಪಡೆದ ಕೈ ಸರ್ಕಾರ. ಡಿ.ಕೆ.ಶಿವಕುಮಾರ್, ಪರಮೇಶ್ವರ್ ರಿಕ್ವೆಸ್ಟ್ಗೆ ಅಸ್ತು ಅಂದಿದೆ ಕ್ಯಾಬಿನೇಟ್. ಪುಂಡರಿಗೆ ಸಿಕ್ತಿದ್ಯಾ ಸರ್ಕಾರದ ಶ್ರೀರಕ್ಷೆ..? ಕೆರಳಿ ಕಂಡವಾಗಿದೆ ಕೇಸರಿ ಪಡೆ. ಸಮರ್ಥನೆಗೆ ಇಳಿದಿದೆ ಕೈ ಸೇನೆ..ಮುಡಾ, ವಾಲ್ಮೀಕಿ ಸಂಕಷ್ಟದ ಮಧ್ಯೆ ಹೊಸ ಸಂಕಷ್ಟವನ್ನ ತಾನಾಗೇ ಮೈ ಮೇಲೆ ಎಳೆದುಕೊಳ್ತಾ ಸಿದ್ದು ಸರ್ಕಾರ..? ಇದೇ ಈ ಹೊತ್ತಿನ ಸುವರ್ಣ ಸ್ಪೆಷಲ್, ಅವರು ಅಮಾಯಕರಾ..?

ಹುಬ್ಬಳ್ಳಿ ಕೇಸ್ ವಾಪಸ್ ವಿಚಾರ ಮುಂದಿಟ್ಟು ಸರ್ಕಾರವನ್ನ ಮತ್ತೊಮ್ಮೆ ಹೆಣೆಯೋಕೆ ಬಿಜೆಪಿ ಸಜ್ಜಾಗಿದ್ರೆ, ಕಮಲ ನಾಯಕರ ಬಾಯಿ ಮುಚ್ಚಿಸೋಕು ಸರ್ಕಾರ ಒಂದು ಅಸ್ತ್ರ ಇಟ್ಕೊಂಡಿದೆ. ಅದ್ರ ಜೊತೆಗೆ ಸಿಎಂ ಸಿದ್ದರಾಮಯ್ಯ ತಮ್ಮ ಕುರ್ಚಿ ಸೇಫ್ ಮಾಡ್ಕೊಳ್ಳೋಕೆ ಈ ತೀರ್ಮಾನಕ್ಕೆ ಬಂದಿದ್ದಾರೆ ಅನ್ನೋ ಮಾತುಗಳು ಇವೆ. ಈ ಎಲ್ಲದರ ಬಗ್ಗೆ ಡೀಟೈಲ್ ಆಗಿ ತೋರಿಸ್ತೀವಿ. 

ನವರಾತ್ರಿ ಹೊತ್ತಲ್ಲಿ ಕಳ್ಳತನವಾಯ್ತು ದೇವಿ ಕಿರೀಟ: ಜೆಶೋರೇಶ್ವರಿ ದೇವಿಗೆ ಮೋದಿ ಕೊಟ್ಟ ಕಾಣಿಕೆ ಏನಾಯ್ತು?

ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ತೆಗೆದುಕೊಳ್ಳೋಕೆ ಮುಂದಾಗಿದೆ ಸರ್ಕಾರ. ಈ ನಿರ್ಧಾರವನ್ನ ಕಟುವಾಗಿ ಟೀಕಿಸ್ತಿದೆ ಬಿಜೆಪಿ. ಹೋರಾಟದ ಎಚ್ಚರಿಕೆಯನ್ನ ಸಹ ಕಮಲ ನಾಯಕರು ಕೊಟ್ಟಿದ್ದಾರೆ. ಆದ್ರೆ, ಇಲ್ಲಿಯೂ ಕಾಂಗ್ರೆಸ್ ಒಂದು ಸೇಫ್ ಗೇಮ್ ಆಡಿದೆ. ಅದೊಂದು ಅಸ್ತ್ರ ಮುಂದಿಟ್ಟು ಬಿಜೆಪಿ ನಾಯಕರ ಬಾಯಿ ಮುಚ್ಚಿಸೋಕೆ ಸಜ್ಜಾಗಿದೆ ಕೈ ಪಡೆ. ಈ ಮಧ್ಯೆ, ಕೇಸ್ ವಾಪಸ್ ತೆಗೆದುಕೊಳ್ಳೋ ತೀರ್ಮಾನದ ಹಿಂದೆ ಸಿದ್ದರಾಮಯ್ಯ ಕುರ್ಚಿ ಸೇಫ್ ಮಾಡ್ಕೊಳ್ಳೋ ತಂತ್ರವೂ ಇದೆ ಎನ್ನಲಾಗ್ತಿದೆ. 

ಅಷ್ಟಕ್ಕೂ, ಈಗ ಈ ಮಟ್ಟಿಗಿನ ಜಟಾಪಟಿಗೆ ಕಾರಣವಾಗ್ತಿರೋ ಹುಬ್ಬಳ್ಳಿ ಗಲಭೆಗೆ, ಕಾರಣ ಏನಾಗಿತ್ತು..? ಅದ್ರ ತನಿಖೆ ಯಾವ ಹಂತದಲ್ಲಿತ್ತು ಅಂತ ತೋರಿಸ್ತೀವಿ.  2022ರಲ್ಲಿ ನಡೆದಿದ್ದ ಹುಬ್ಭಳ್ಳಿ ಗಲಭೆ ಪ್ರಕರಣ ಈಗ ಮತ್ತೆ ಎದ್ದು ಕೂತಿದೆ. ಈ ಕೇಸ್ನ ವಾಪಸ್ ಪಡೆಯೋ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಹಾಗಿದ್ರೆ, ಅಂದು ಯಾವ ಕಾರಣಕ್ಕೆ ಗಲಭೆ ನಡೆದಿತ್ತು..? ಅದರ ತನಿಖೆಯ ಯಾವ ಹಂತದಲ್ಲಿತ್ತು ಅನ್ನೋದನ್ನ ತೋರಿಸ್ತೀವಿ ನೋಡಿ. 

ಇದನ್ನ ಇಲ್ಲಿಗೆ ಬಿಡೋ ಮಾತಿಲ್ಲ. ನಾವು ಮುಂದೆ ಹೋರಾಡ್ತೀವಿ ಅಂತ ಬಿಜೆಪಿ ಅಬ್ಬರಿಸ್ತಾಯಿದೆ. ಕಾಂಗ್ರೆಸ್ ಎಲ್ಲವೂ ಸರಿ ಇದೆ ಅಂತ ಸಮರ್ಥಿಸಿಕೊಳ್ತಿದೆ. 

Video Top Stories