NewsHour ಸದನದಲ್ಲಿ ಸಿದ್ದರಾಮಯ್ಯ ಮೇಷ್ಟ್ರ ವ್ಯಾಕರಣ ಪಾಠ, ನಮ್ ಕಡೆ ಹಿಂಗೆ ಎಂದ ಆರ್ ಅಶೋಕ್!
ತಪ್ಪಾಗಿ ಉಚ್ಚರಿಸಿದ ಆರ್ ಅಶೋಕ್‌ಗೆ ಸಿದ್ದರಾಮಯ್ಯ ಕನ್ನಡ ಪಾಠ ಮಾಡಿದ್ದಾರೆ. ಇನ್ನು ಮತಾಂತರ ನಿಷೇಧ ವಿಧೇಯಕ ಅಂಗೀಕಾರ, ಒತ್ತುವರಿ ಚರ್ಚೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕಲಾಪದಲ್ಲಿ ರಾಜಕಾಲುವೆ ಒತ್ತುವರಿ, ಮತಾಂತರ ನಿಷೇಧ ವಿಧೇಯಕ ಅಂಗೀಕಾರ ಸೇರಿದಂತೆ ಹಲವು ಗಂಭೀರ ವಿಷಯಗಳ ಕುರಿತು ಚರ್ಚೆ, ಗದ್ದಲ, ಗಲಾಟನೆ ನಡೆದಿದೆ. ಇದರ ನಡುವೆ ಆರ್ ಅಶೋಕ್ ತಪ್ಪು ಉಚ್ಚಾರಕ್ಕೆ ಸಿದ್ದರಾಮಯ್ಯ ಕನ್ನಡದ ವ್ಯಾಕರಣ ಪಾಠ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಆರ್ ಅಶೋಕ್ ಇದು ಬೆಂಗಳೂರು ಭಾಷೆ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಮೈಸೂರು ಬೆಂಗಳೂರು ಭಾಷೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಸರಿಯಾಗಿ ಉಚ್ಚಾರ ಮಾಡಿ ಎಂದು ಸಿದ್ದು ಪಾಠ ಮಾಡಿದ್ದಾರೆ. ಈ ವಿಡೀಯೋ ವೈರಲ್ ಆಗಿದೆ.