ಕಾಂಗ್ರೆಸ್‌ ಶಿವಲಿಂಗೇಗೌಡ ಸೇರ್ಪಡೆ ಪಕ್ಕಾ! ಖಚಿತಪಡಿಸಿದ ಸಿದ್ದರಾಮಯ್ಯ

ಶಾಸಕ ಶಿವಲಿಂಗೇಗೌಡ ಸೇರ್ಪಡೆ ಪಕ್ಕಾ ಎಂದು ಸಿದ್ದರಾಮಯ್ಯ ಖಚಿತ ಪಡಿಸಿದ್ದಾರೆ. ಸಿಂಧನೂರಿನಲ್ಲಿ ಈ ಬಗ್ಗೆ ಮಾಧ್ಯಮ ಜೊತೆ ಮಾತನಾಡಿರುವ ಸಿದ್ದರಾಮಯ್ಯ ಅವರು, ಕಾಂಗ್ರೆಸ್‌ಗೆ ಬರುತ್ತಾರೆ ಅನುಮಾನನಾ ಎಂದಿದ್ದಾರೆ.

Share this Video
  • FB
  • Linkdin
  • Whatsapp

ರಾಯಚೂರು (ಫೆ.12): ಶಾಸಕ ಶಿವಲಿಂಗೇಗೌಡ ಸೇರ್ಪಡೆ ಪಕ್ಕಾ ಎಂದು ಸಿದ್ದರಾಮಯ್ಯ ಖಚಿತ ಪಡಿಸಿದ್ದಾರೆ. ಸಿಂಧನೂರಿನಲ್ಲಿ ಈ ಬಗ್ಗೆ ಮಾಧ್ಯಮ ಜೊತೆ ಮಾತನಾಡಿರುವ ಸಿದ್ದರಾಮಯ್ಯ ಅವರು, ಕಾಂಗ್ರೆಸ್‌ಗೆ ಬರುತ್ತಾರೆ ಅನುಮಾನನಾ ಎಂದಿದ್ದಾರೆ. ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಅಧಿವೇಶನ ಮುಗಿಯುವುದರೊಳಗೆ ಮುಂದಿನ ನಡೆ ಬಗ್ಗೆ ಒಂದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಹೇಳದೆ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಫೆ.12ರಂದು ಸಮಾವೇಶ ಮಾಡಲಾಗುತ್ತಿದೆ. ಆ ಸಭೆಯಲ್ಲಿ ಏನಾಗಲಿದೆಯೋ ಅದರ ಆಧಾರದ ಮೇಲೆ ನಾನು ಕಾರ್ಯಕರ್ತರ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತೇನೆ. ನಾನು ಬಿಜೆಪಿಗೆ ಸೇರುವುದಿಲ್ಲ. ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದೇನೆ ಎಂದಿದ್ದರು.

Related Video