ಪ್ರಧಾನಿ ಮೋದಿ, ಯಡಿಯೂರಪ್ಪ ಕುರಿತಾಗಿ ಸಿದ್ಧರಾಮಯ್ಯ ವಿವಾದಾತ್ಮಕ ಮಾತು!

ಬಿಜೆಪಿ ಸರ್ಕಾರದ ಭ್ರಷ್ಟಚಾರದ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್‌ ನಡೆಸಿದ ಬೃಹತ್‌ ಪ್ರತಿಭಟನೆಯ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿವಾದಾತ್ಮಕ ಮಾತುಗಳನ್ನು ಹೇಳಿದ್ದಾರೆ. ಯಡಿಯೂರಪ್ಪ, ಕೇಂದ್ರ ಬಿಜೆಪಿಗೆ ಬೇಕಾದಷ್ಟು ಹಣ ನೀಡದ ಕಾರಣಕ್ಕಾಗಿಯೇ ಅವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಲಾಯಿತು ಎಂದು ಆರೋಪಿಸಿದ್ದಾರೆ.
 

First Published Mar 4, 2023, 12:57 PM IST | Last Updated Mar 4, 2023, 12:57 PM IST

ಬೆಂಗಳೂರು (ಮಾ.4): ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿಎಸ್‌ ಯಡಿಯೂರಪ್ಪ ವಿರುದ್ಧ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ. ಕೇಂದ್ರ ಬಿಜೆಪಿಗೆ ಕರ್ನಾಟಕದಿಂದ ಬರಬೇಕಾದಷ್ಟು ಹಣ ನೀಡಲು ಬಿಎಸ್‌ವೈ ವಿಫಲರಾಗಿದ್ದ ಕಾರಣಕ್ಕಾಗಿಯೇ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಲಾಯಿತು ಎಂದು ಆರೋಪಿಸಿದ್ದಾರೆ.

ಕುರ್ಚಿಗೆ ಅಂಟ್ಕೊಂಡು ಕುಳಿತಿರುವ ಬಿಜೆಪಿಯನ್ನು ಒದ್ದೋಡಿಸಬೇಕು: ಸಿದ್ಧರಾಮಯ್ಯ ವಾಗ್ದಾಳಿ

ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಲಾಯಿತು. ಆದರೆ, ಬಿಎಸ್‌ವೈ ಮಾತ್ರ ತಾವೇ ರಾಜೀನಾಮೆ ನೀಡಿದ್ದು ಎನ್ನುತ್ತಾರೆ. ಹಾಗಿದ್ದರೆ, ಅವರು ಕಣ್ಣೀರು ಹಾಕಿದ್ದೇಕೆ ಎಂದು ಸಿದ್ಧರಾಮಯ್ಯ ಪ್ರಶ್ನೆ ಮಾಡಿದ್ದಾರೆ.  ಬಿಎಸ್‌ವೈ ಅವರನ್ನು ಕಿತ್ತುಹಾಕಿದ ಬಳಿಕ ಆರೆಸ್ಸೆಸ್‌ನ ಮಾತು ಕೇಳುವ ಗೊಂಬೆ ಬಸವರಾಜ್‌ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಆರೋಪಿಸಿದ್ದಾರೆ.