Hijab Row ಮುಸ್ಲಿಂ ಧರ್ಮಗುರುಗಳು ಗಡ್ಡ ಬಿಡ್ತಾರೆ, ಹಾಗಂತ ವಿದ್ಯಾರ್ಥಿಗಳಿಗೆ ಅದನ್ನೇ ಹೇಳೋಕೆ ಆಗುತ್ತಾ?

ಸಿದ್ಧರಾಮಯ್ಯ ಅವರಿಂದ ವೋಟ್ ಬ್ಯಾಂಕ್ ರಾಜಕಾರಣಹಿಜಾಬ್ ವಿಚಾರದಲ್ಲಿ ಸ್ವಾಮೀಜಿಗಳನ್ನು ಎಳೆ ತಂದಿರುವುದು ತಪ್ಪುಸ್ವಾಮೀಜಿಗಳ ವೇಷಭೂಷಣವನ್ನು ಹೋಲಿಸಿ ಮಾತನಾಡಿದ್ದ ಸಿದ್ಧರಾಮಯ್ಯ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 25): ಸ್ವಾಮೀಜಿಗಳು (Swamiji) ತಲೆಮೇಲೆ ಬಟ್ಟೆ ಹಾಕಿಕೊಳ್ತಾರೆ, ಅದೇ ರಿತಿ ಮುಸ್ಲಿಂ ಹೆಣ್ಣುಮಕ್ಕಳಿಗೂ ಅವಕಾಶ ನೀಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Former CM Siddaramaiah ) ವಿರುದ್ಧ ಆಡಳಿತ ಪಕ್ಷ ಬಿಜೆಪಿಯ (BJP) ನಾಯಕರು ತಿರುಗಿಬಿದ್ದಿದ್ದಾರೆ. ಸಿದ್ಧರಾಮಯ್ಯ ಈ ವಿಚಾರದಲ್ಲಿ ಸ್ವಾಮೀಜಿಗಳ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh), ಸ್ವಾಮೀಜಿಗಳುತಲೆಗೆ ಬಟ್ಟೆ ಹಾಕ್ತಾರೆ, ಅದಕ್ಕೆ ಮುಸ್ಲಿಂ ಹುಡುಗಿಯರಿಗೂ ಅದೇ ರೀತಿ ಅವಕಾಶ ನೀಡಿ ಅಂತಾ ಹೇಳ್ತಿದ್ದಾರೆ. ಮುಸ್ಲಿಂ ಧರ್ಮಗುರುಗಳು ಗಡ್ಡ ಬಿಡ್ತಾರೆ, ಟೋಪಿ ಹಾಕ್ತಾರೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಉದ್ದುದ್ದ ಗಡ್ಡ ಬಿಟ್ಟುಕೊಂಡು ಬರಲು ಅನುಮತಿ ಕೊಡೋಕೆ ಸಾಧ್ಯವಾಗುತ್ತಾ? ಬಹುಶಃ ಅವರು ಹಾಗೇ ಹೇಳಿಲ್ಲ ಅನ್ನೋದೆ ನಮ್ಮ ಪುಣ್ಯ. ಚುನಾವಣೆ ಆದ ನಂತರ ಸಿದ್ಧರಾಮಯ್ಯ ಹತಾಶರಾಗಬಹುದು ಎಂದು ಅಂದುಕೊಂಡಿದ್ದೆ. ಆದರೆ, ಅವರ ಈ ಮಾತುಗಳನ್ನು ಕೇಳಿದರೆ, ಈಗಲೇ ಹತಾಶರಾಗಿರುವಂತೆ ಕಾಣುತ್ತಿದೆ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ಹಿಂದೂ ಹೆಣ್ಮಕ್ಕಳು, ಸ್ವಾಮೀಜಿಗಳು ತಲೆಮೇಲೆ ಬಟ್ಟೆ ಹಾಕ್ತಾರೆ, ಮುಸ್ಲಿಂ ಹುಡ್ಗೀರು ಹಾಕಿದ್ರೆ ತಪ್ಪೇನು?

ಹಿಜಾಬ್ ನಂಥ ವಿಚಾರದಲ್ಲಿ ಸ್ವಾಮೀಜಿಗಳನ್ನು ಎಳೆದು ತಂದಿರುವುದೇ ತಪ್ಪು. ಸಿದ್ಧರಾಮಯ್ಯ ಅವರಂಥ ಹಿರಿಯ ರಾಜಕಾರಣಿ ಆಡುವ ಮಾತುಗಳಲ್ಲ. ಅವರು ಸ್ವಾಮೀಜಿಗಳ ಕ್ಷಮೆ ಕೇಳಬೇಕು. ಇಂಥದ್ದೊಂದು ಮಾತುಗಳನ್ನು ಹೇಳುವ ಮೂಲಕ ಅಗತ್ಯವಿಲ್ಲ ವೋಟ್ ಬ್ಯಾಂಕ್ ರಾಜಕಾರಣವನ್ನು ಮಾಡುವುದನ್ನು ಅವರು ಬಿಡಬೇಕು ಎಂದು ಬಿಸಿ ನಾಗೇಶ್ ಹೇಳಿದ್ದಾರೆ.

Related Video