ಕೊಪ್ಪಳ, ಕುಷ್ಠಗಿಯಿಂದ ಸ್ಪರ್ಧೆ?: ಸಿದ್ದರಾಮಯ್ಯ ಗೆಲುವಿನ ಸೂತ್ರಕ್ಕೆ ಹೀಗಿದೆ ಜಾತಿ ಲೆಕ್ಕಾಚಾರ!

ಕೊಪ್ಪಳ ಹಾಗೂ ಕುಷ್ಠಗಿಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರಗಳಲ್ಲಿ ಕುರುಬ, ಮುಸ್ಲಿಂ ಮತಗಳು ಹೆಚ್ಚಿರುವುದರಿಂದ ಗೆಲುವಿನ ಲೆಕ್ಕಾಚಾರ ಹಾಕಲಾಗುತ್ತಿದೆ. ಇದರ ಜೊತೆಗೆ ಕಡೂರು ಕೂಡ ಸೇರಿಕೊಂಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.23): ರಾಜ್ಯದಲ್ಲೀಗ ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದೇ ದೊಡ್ಡ ಸುದ್ದಿಯಾಗಿದ್ದು ಚರ್ಚೆಗೆ ಗ್ರಾಸ ಒದಗಿಸಿದೆ. ಕೋಲಾರ ಸೇಫ್‌ ಅಲ್ಲಎಂದು ಎಐಸಿಸಿ ವರಿಷ್ಠ ರಾಹುಲ್‌ ಗಾಂಧಿಯವರು ಸಿದ್ದುಗೆ ಹೊಸದಿಲ್ಲಿಯ ಸಭೆಯಲ್ಲಿ ಹೇಳಿದ್ದಾರೆ ಎಂದ ಬಳಿಕ ಮತ್ತೆ ವರುಣಾ ವಿಧಾನಸಭಾ ಕ್ಷೇತ್ರದತ್ತ ಸಿದ್ದು ಬರಬಹುದು ಎಂಬ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಶುರುವಾಗಿದ್ದು, ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉಮೇದಿನಲ್ಲಿ ಕಾಂಗ್ರೆಸ್‌ ಇದೆ. ಇದೀಗ ಕೊಪ್ಪಳ ಹಾಗೂ ಕುಷ್ಠಗಿಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರಗಳಲ್ಲಿ ಕುರುಬ, ಮುಸ್ಲಿಂ ಮತಗಳು ಹೆಚ್ಚಿರುವುದರಿಂದ ಗೆಲುವಿನ ಲೆಕ್ಕಾಚಾರ ಹಾಕಲಾಗುತ್ತಿದೆ. ಇದರ ಜೊತೆಗೆ ಕಡೂರು ಕ್ಷೇತ್ರ ಕೂಡ ಸೇರಿಕೊಂಡಿದೆ.

Related Video