ಸಿದ್ದುಗೆ ಹಿನ್ನಡೆ ಮಡಿಕೇರಿ ಚಲೋ ಯಾತ್ರೆ ರದ್ದು, ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ!

ಸಿದ್ದರಾಮಯ್ಯ ಕರೆ ನೀಡಿದ್ದ ಮಡಿಕೇರಿ ಚಲೋ ಯಾತ್ರೆ ರದ್ದಾಗಿದೆ. ಆದರೆ ಇದರ ಹಿಂದೆ ಹಲವು ಕಾರಣಗಳಿವೆ. ಸ್ವತಃ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಸೂಚನೆ ನೀಡಿತಾ ಅನ್ನೋ ಮಾತುಗಳು ಕೇಳಿಬಂದಿದೆ. ಗುಪ್ತಚರ ಇಲಾಖೆ ಮಾಹಿತಿ, ಸಾವರ್ಕರ್ ರಥ ಯಾತ್ರ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

First Published Aug 23, 2022, 10:46 PM IST | Last Updated Aug 23, 2022, 10:46 PM IST

ಮಡಿಕೇರಿ ಪ್ರವಾಸದಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆಯಿಂದ ಕೆರಳಿದ ಕಾಂಗ್ರೆಸ್ ಆಗಸ್ಟ್ 26ಕ್ಕೆ ಮಡಿಕೇರಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಮಡಿಕೇರಿ ಜಿಲ್ಲಾಡಳಿತ ನಿಷೇಧಾಜ್ಞೆಯಿಂದ ಸಿದ್ದರಾಮಯ್ಯ ಮಡಿಕೇರಿ ಚಲೋ ಕಾರ್ಯಕ್ರಮ ರದ್ದಾಗಿದೆ.ಸಿದ್ದರಾಮಯ್ಯನವರ ಮಡಿಕೇರಿ ಚಲೋ ಕಾರ್ಯಕ್ರಮ ಕಾರಣಕ್ಕೆ ಮಡಿಕೇರಿಯಲ್ಲಿ ಸೆಕ್ಷನ್ 144 ಜಾರಿ ಮಾಡಿಲ್ಲ. ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ ನೀಡಿದೆ. ಆಗಸ್ಟ್ 26 ರಂದು ಕೇರಳದ ಪಿಎಫ್ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಆಗಮಿಸಿ ಸಮಾವೇಶದ ಸ್ವರೂಪ ಬದಲಿಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.