ಕಾಂಗ್ರೆಸ್‌ಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಟಕ್ಕರ್ ಕೊಟ್ಟ ಟಗರು ಸಿದ್ದು; ಕೈ ಪಾಳಯಕ್ಕೆ ಬಿತ್ತು ಗುದ್ದು!
ಮಾಜಿ ಸಿಎಂ ಸಿದ್ದರಾಮಯ್ಯ ಕೆಲವೊಮ್ಮೆ ಹಾಕುವ ಬಾಂಬ್ ವಿರೋಧ ಪಕ್ಷದವರಲ್ಲ, ತಮ್ಮ ಪಕ್ಷದವರೇ ಮುಟ್ಟಿ ನೋಡಿಕೊಳ್ಳುವ ಹಾಗಿರುತ್ತದೆ. ಚಾಮುಂಡೇಶ್ವರಿ ಸೋಲಿನ ಬಗ್ಗೆ 3 ವರ್ಷಗಳ ಬಳಿಕ ಮಾತನಾಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ ಎಂದು ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು (ಡಿ. 19): ಮಾಜಿ ಸಿಎಂ ಸಿದ್ದರಾಮಯ್ಯ ಕೆಲವೊಮ್ಮೆ ಹಾಕುವ ಬಾಂಬ್ ವಿರೋಧ ಪಕ್ಷದವರಲ್ಲ, ತಮ್ಮ ಪಕ್ಷದವರೇ ಮುಟ್ಟಿ ನೋಡಿಕೊಳ್ಳುವ ಹಾಗಿರುತ್ತದೆ. ಚಾಮುಂಡೇಶ್ವರಿ ಸೋಲಿನ ಬಗ್ಗೆ 3 ವರ್ಷಗಳ ಬಳಿಕ ಮಾತನಾಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ ಎಂದು ಬಾಂಬ್ ಸಿಡಿಸಿದ್ದಾರೆ. 'ನಾನು 2 ನೇ ಬಾರಿ ಸಿಎಂ ಆಗೋದು ಕೆಲವರಿಗೆ ಇಷ್ಟವಿರಲಿಲ್ಲ. ನಾನು ಸೋಲಲು ಬಿಜೆಪಿ, ಜೆಡಿಎಸ್‌ನವರು ಮಾತ್ರ ಅಲ್ಲ ಕಾಂಗ್ರೆಸ್‌ನವರು ಕಾರಣರು' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷದವರೇ ನನ್ನನ್ನು ಸೋಲಿಸಿದ್ರು ಎನ್ನುವ ಸಿದ್ದು ಮಾತಿಗೆ ಡಿಕೆಶಿ ಪ್ರತಿಕ್ರಿಯೆ
ಚಾಮುಂಡೇಶ್ವರಿ ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ. ಗ್ರಾಮಗಳಿಗೆ ಹೋದಾಗ ಜನ ಪ್ರೀತಿ ತೋರಿಸಿದರು. ಆದರೆ ಮತ ಹಾಕಲಿಲ್ಲ. ಇಷ್ಟು ಕೆಟ್ಟದಾಗಿ ಸೋಲುತ್ತೇನೆ ಎಂದುಕಂಡಿರಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಾದಾಮಿಗೆ ಗುಡ್ ಬೈ ಹೇಳಿ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಚಿಂತನೆ ನಡೆಸುತ್ತಿದ್ದಾರೆ. ಯಾವುದು ಅ ಕ್ಷೇತ್ರ? ಏನಿವರ ಮುಂದಿನ ರಾಜಕೀಯ ನಡೆ? ನೋಡೋಣ ಸುವರ್ಣ ಸ್ಪೆಷಲ್‌ನಲ್ಲಿ..!